ಹೈದರಾಬಾದ್ ನಲ್ಲಿ ಇಂದು ಮುಂಜಾನೆ ನಡೆದ ಎನ್ ಕೌಂಟರ್ ಒಂದು ದೇಶದಲ್ಲಿ ಇಷ್ಟೆಲ್ಲಾ ಸದ್ದು ಮಾಡುತ್ತದೆ ಎಂದು ನಿದ್ರೆಯಲ್ಲಿದ್ದ ಯಾರೊಬ್ಬರೂ ಊಹಿಸಿರಲಿಲ್ಲ. ಅಸಹಾಯಕ ಹೆಣ್ಣು ಮಗಳ ಮೇಲೆ ದೌರ್ಜನ್ಯ ಮೆರೆದ ನಾಲ್ವರು ವಿಕೃತ ಮನಸ್ಸಿನ ಆರೋಪಿಗಳಿಗೆ ತಕ್ಕ ಶಿಕ್ಷೆಯಾಯಿತು ಎಂಬ ಸುದ್ದಿ ಬೆಳಗಿನ ಜಾವ ದೇಶದೆಲ್ಲೆಡೆ ಹರಿದಾಡಿ ಒಂದು ಸಂಚಲನವನ್ನು ಸೃಷ್ಟಿಸಿತು. ಸಮಸ್ತ ನಾರಿ ಸಮಾಜ ಸಂತಸ ಪಟ್ಟಿತು‌.‌ ಮೊದಲ ಬಾರಿಗೆ ಘೋರ ಕೃತ್ಯ ಎಸಗಿದ ಪೈಶಾಚಿಕ ಪ್ರವೃತ್ತಿ ಮೆರೆದ ಆರೋಪಿಗಳಿಗಾದ ಗತಿ ನೋಡಿ ಸಂಭ್ರಮ ಪಟ್ಟವರು ಕೋಟಿಗಟ್ಟಲೇ ದೇಶದ ಪ್ರಜೆಗಳು.

ಅರೋಪಿಗಳ ಮೇಲೆ ಇಂತಹುದೊಂದು ಕಠಿಣ ಕ್ರಮ ಕೈಗೊಂಡ ಪೋಲಿಸ್ ವೃಂದ ಅದರಲ್ಲೂ ವಿಶೇಷವಾಗಿ ಕನ್ನಡಿಗರಾದ ವಿಶ್ವನಾಥ್ ಸಜ್ಜನರ್ ಅವರ ಕಾರ್ಯದ ಬಗ್ಗೆ ಪ್ರಶಂಸೆಗಳ ಮಹಾ ಪೂರವೇ ಹರಿದು ಬರುತ್ತಿದೆ. ಮಾನವತಾವಾದಿಗಳೆಂಬುವವರು ಮಾತ್ರ ಈ ಕೃತ್ಯವನ್ನು ವಿರೋಧಿಸುತ್ತಿದ್ದರೆ, ಉಳಿದಂತೆ ತೊಂಬತ್ತು ಪ್ರತಿಶತ ದೇಶದ ಜನರು ಪೋಲಿಸರ ಕಾರ್ಯವನ್ನು ಮೆಚ್ಚಿದ್ದಾರೆ. ಸೆಲೆಬ್ರಿಟಿ ಗಳು, ರಾಜಕಾರಣಿಗಳು ಕೂಡಾ ಪೋಲಿಸ್ ಕಾರ್ಯಾಚರಣೆಯನ್ನು ಸಮರ್ಥನೆ ಮಾಡಿದ್ದಾರೆ.

ಇದೀಗ ಕಾರ್ಯಾಚರಣೆಯ ಬಗ್ಗೆ ಸ್ವತಃ ಕನ್ನಡಿಗರಾದ ವಿಶ್ವನಾಥ್ ಸಜ್ಜನ್ ಅವರು ಮಾಧ್ಯಮಗಳಿಗೆ ಕನ್ನಡಲ್ಲೂ ವಿವರಣೆ ನೀಡಿದ್ದು ವಿಶ್ವನಾಥ್ ಸಜ್ಜನರ್ ಅವರು ಕನ್ನಡದಲ್ಲಿ ಮಾತನಾಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.. ಈ ವೀಡಿಯೊ ನೋಡಿ.

ಕನ್ನಡದಲ್ಲೇ ಘಟನೆ ವಿವರ ನೀಡಿದ ವಿಶ್ವನಾಥ್ ಸಜ್ಜನರ

Nam Duniya यांनी वर पोस्ट केले शुक्रवार, ६ डिसेंबर, २०१९

https://m.facebook.com/story.php?story_fbid=126687862113385&id=107219637393541

https://m.facebook.com/story.php?story_fbid=2478230065770670&id=1408585776068443

https://m.facebook.com/story.php?story_fbid=2478230065770670&id=1408585776068443

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here