ಈ ವರ್ಷ ಕನ್ನಡ ಚಿತ್ರರಂಗಕ್ಕೆ ಅತ್ಯಂತ ನೋವುಂಟು ಮಾಡಿದ ಸುದ್ದಿ ಎಂದರೆ ಅದು ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಸುದ್ದಿ. ಎಲ್ಲರೊಂದಿಗೂ ನಗುನಗುತ್ತಾ ಚೆನ್ನಾಗಿ ಮಾತನಾಡಿಸಿಕೊಂಡು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಯುವ ನಾಯಕ ನಟ ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದರು. ಚಿರಂಜೀವಿ ಸರ್ಜಾ ಅವರ ನೋವಿನಿಂದ ಸಹಜವಾಗಿಯೇ ಕನ್ನಡ ಸಿನಿ ರಸಿಕರು ಆಘಾ’ತಕ್ಕೊಳಗಾದರು.

ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ನಟಿ ಮೇಘನಾ ರಾಜ್ ಅವರ ಪರಿಸ್ಥಿತಿಯಂತೂ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಭಾರವಾದ ನೋವಿನಿಂದ ಚಿರಂಜೀವಿ ಸರ್ಜಾ ಅವರನ್ನು ಕಳಿಸಿಕೊಟ್ಟು ಮೇಘನಾ ರಾಜ್ ಅವರು ಬರುವ ಪುಟ್ಟ ಚಿರಂಜೀವಿ ಗಾಗಿ ಕಾಯುತ್ತಿದ್ದಾರೆ. ಸರ್ಜಾ ಕುಟುಂಬಕ್ಕೂ ಸಹ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಸುದ್ದಿ ಹೇಳಲಾಗದಷ್ಟು ನೋವು ತಂದಿದೆ. ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಅವರು ಚಿರಂಜೀವಿ ಸರ್ಜಾ ಅವರ ಮೇಲೆ ಇಟ್ಟಿದ್ದ ಪ್ರೀತಿ ಪದಗಳಿಗೆ ಸಿಗದಷ್ಟು ದೊಡ್ಡದು. ಚಿರಂಜೀವಿ ಸರ್ಜಾ ನಮ್ಮನ್ನು ಬಿಟ್ಟು ಹೋದ ನಂತರ ಚಿರಂಜೀವಿ ಸರ್ಜಾ ಅವರನ್ನು ಕುರಿತಾಗಿ ಪತ್ನಿ ಮೇಘನರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೋವಿನಿಂದ ಪೋಸ್ಟ್ ಮಾಡಿದ್ದರು.

ಇಷ್ಟು ದಿನ ಮೇಘನಾರಾಜ್ ಎಂಬ ಹೆಸರಿನಿಂದ ಸೋಶಿಯಲ್ ಮೀಡಿಯಾ ಬಳಸುತ್ತಿದ್ದ ಮೇಘನಾ ರಾಜ್ ಅವರು ಇದೀಗ ತಮ್ಮ ಹೆಸರನ್ನು “ಮೇಘನಾ ರಾಜ್ ಸರ್ಜಾ” ಎಂದು ಬದಲಿಸಿಕೊಂಡಿದ್ದಾರೆ . ಈ ಮೂಲಕ ಇನ್ನು ಮುಂದೆ ತಮ್ಮ ಹೆಸರಿನಲ್ಲಿಯೂ ಸಹ ಚಿರಂಜೀವಿ ಸರ್ಜಾ ಚಿರಾಯುವಾಗಿ ಇರಬೇಕು ಎಂಬ ಪ್ರೀತಿಯನ್ನು ಈ ರೀತಿಯಾಗಿ ಮೇಘನರಾಜ್ ತೋರಿಸಿಕೊಂಡಿದ್ದಾರೆ.ಮೇಘನಾ ರಾಜ್ ಸೇರಿ ಲಕ್ಷಾಂತರ ಜನರ ಆಸೆಯಂತೆ ಚಿರಂಜೀವಿ ಸರ್ಜಾ ಮತ್ತೆ ಮೇಘನಾ ಮಡಿಲಲ್ಲಿ ಹುಟ್ಟಿಬಂದು ಮೇಘನಾ ರಾಜ್ ಜೊತೆಗೆ ಚಿರಕಾಲ ಖುಷಿಯಾಗಿ ಜೊತೆಯಾಗಿರಲಿ ಎಂಬುದೇ ಆ ದೇವರಲ್ಲಿ ನಮ್ಮ ಕೋರಿಕೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here