ತಂದೆ ತಾಯಿಗಳಿಗೆ ಮಕ್ಕಳೆಂದರೆ ಪಂಚ ಪ್ರಾಣ. ಮಕ್ಕಳೇ ಅವರ ಲೋಕ ಹಾಗೂ ಮಕ್ಕಳೇ ಅವರ ಸರ್ವಸ್ವ. ತಂದೆ ತಾಯಿಗಳು ತಮ್ಮ ಕರುಳ ಕುಡಿಗಳ ಸಂತೋಷಕ್ಕಾಗಿ ಏನೇ ಬೇಕಾದರೂ ಮಾಡಬಲ್ಲರು. ಯಾವ ತ್ಯಾಗಕ್ಕಾದರೂ ಸಿದ್ಧರಾಗುವರು. ಪ್ರಕೃತಿಯಲ್ಲಿ ಈ ಸಂಬಂಧಕ್ಕೆ ಮಿಗಿಲಾದ ಮತ್ತೊಂದು ಬಂಧವಿಲ್ಲ‌. ತಂದೆ ತಾಯಿಯರು ಮಕ್ಕಳ ಅಗತ್ಯ ಪೂರೈಸಲು ತಮ್ಮ ಸರ್ವ ಪ್ರಯತ್ನವನ್ನು ಮಾಡುವರು. ಬಡವರಾದರೂ ಕೂಡಾ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ಮಕ್ಕಳ ಆಸೆಗಳನ್ನು ಪೂರೈಸುವ ಪ್ರಯತ್ನ ಮಾಡುವರು. ಇಲ್ಲೊಬ್ಬ ತಂದೆ ತಮ್ಮ ಮಗಳಿಗಾಗಿ, ಆಕೆಯ ಆಟಿಕೆಗಾಗಿ ಒಂದು ಅದ್ಭುತವಾದ ಕಾರ್ಯ ಮಾಡಿದ್ದಾರೆ.

ಕೇರಳದ ಅರುಣ್ ಕುಮಾರ್ ಪುರುಷೋತ್ತಮನ್ ಇಡುಕ್ಕಿಯ ಕೇರಳ ಹೆಲ್ತ್ ಸರ್ವೀಸ್ ನಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಇನ್ನು ಅವರು ಹಲವು ತಿಂಗಳುಗಳ ಕಾಲ ಶ್ರಮವಹಿಸಿ ತಮ್ಮ ಮಕ್ಕಳಿಗೆ ಆಡುವುದಕ್ಕಾಗಿ ಒಂದು ಪುಟಾಣಿ ಆಟೋವೊಂದನ್ನು ತಯಾರಿಸಿದ್ದಾರೆ. ಅದಕ್ಕೆ ಸುಂದರಿ ಆಟೋ ಎಂದು ಕೂಡಾ ಹೆಸರನ್ನು ನೀಡಿದ್ದಾರೆ. ತಮ್ಮ ಇಬ್ಬರು ಪುಟಾಣಿ ಮಕ್ಕಳಿಗಾಗಿ ಅವರು ತಯಾರಿಸಿರುವ ಈ ಆಟೋ ನಿಜಕ್ಕೂ ಬಹಳ ಸೊಗಸಾಗಿದ್ದು, ಅಕ್ಷರಶಃ ನಿಜವಾದ ಆಟೋ ರೀತಿಯಲ್ಲೇ ಇದೆ.

ಅವರ ಪುಟಾಣಿಗಳಿಬ್ಬರು ಆಟೋದಲ್ಲಿ ಕುಳಿತು ಅದನ್ನು ಓಡಿಸುವ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಾಕಿದ್ದು, ಈ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಶ್ರೀಮಂತರ ಮಕ್ಕಳಿಗೆ ಆಡಲು ಕೊಡಿಸುವ ಕಾರುಗಳು ಹಾಗೂ ಇತರೆ ಆಟಿಕೆಗಳಂತೆ, ತಮ್ಮ ಮಕ್ಕಳಿಗಾಗಿ ಅರುಣ್ ಕುಮಾರ್ ಪುಟಾಣಿ ಆಟೋ ಮಾಡಿ ಕೊಟ್ಟು ಮಕ್ಕಳ ನೆಚ್ಚಿನ ಅಪ್ಪ ಎನಿಸಿದ್ದಾರೆ. ಯೂಟ್ಯೂಬ್ ನಲ್ಲಿ ಸುಮಾರು ಹತ್ತು ನಿಮಿಷದ ವಿಡಿಯೋದಲ್ಲಿ ನಾವು ಆ ಪುಟಾಣಿ ಆಟೋ ಹಾಗೂ ಅವರ ಮಕ್ಕಳ ಆಟವನ್ನು ನೋಡಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here