ನಿನ್ನೆ ಲಂಡನ್ ನಗರಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಕರ್ನಾಟಕ ಪ್ರವಾಸೋದ್ಯಮ ಮತ್ತು ಸಕ್ಕರೆ ಸಚಿವರಾದ ಶ್ರೀ ಸಿ ಟಿ ರವಿಯವರನ್ನು  ಸನ್ಮಾನಿಸಲಾಯಿತು.ತದನಂತರ ಲಂಡನ್ ಮೇ ಫೇರ್ ನಲ್ಲಿರುವ ಬೆನಾರಸ್ ಹೋಟೆಲ್ ನಲ್ಲಿ ಕನ್ನಡಿಗರೆಲ್ಲ ಸೇರಿ ಸಚಿವರಿಗೆ ಯೇರ್ಪಡಿಸಿದ ಬೋಜನ ಕೂಟದಲ್ಲಿ ಪಾಲ್ಗೊಂಡರು. ಆಮೇಲೆ ಕರ್ನಾಟಕ ಪ್ರವಾಸೋದ್ಯಮ ಮತ್ತು ಕನ್ನಡ ಭಾಷೆ ಸಂಸ್ಕೃತಿಯ ಪ್ರಚಾರಕ್ಕಾಗಿ ಸಚಿವರು ಹಲವಾರು ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡರು.

ಸೇರಿದ್ದ ಎಲ್ಲ ಅನಿವಾಸಿ ಕನ್ನಡಿಗರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ತಾಯ್ನಾಡಿನ ಬಗ್ಗೆ ಹೆಚ್ಚಿನ ಗಮನ ಕೊಡಿ ಎಂದು ಕೋರಿದರು.ಸಲಹೆ ಸೂಚನೆಗಳನ್ನು ಕೊಡುವಂತೆ ಹೇಳಿದರು.ಅದೊಂದು ಆತ್ಮೀಯ ವಾದ ಒಡನಾಟವಾಗಿತ್ತು. ಕನ್ನಡಿಗ ಕೌನ್ಸಿಲರ್ ಆದ ಶ್ರೀ ರವಿ ಕುಮಾರ್ ವೆಂಕಟೇಶ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಪ್ರವಾಸೋದ್ಯಮ ಇಲಾಖೆಯ ಸಲಹೆಗಾರರಾದ ಶ್ರೀ ರತ್ನಾಕರ್ ಉಪಸ್ಥಿತರಿದ್ದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here