ಬೆಂಗಳೂರು,ಅ.14: ಶಾಸಕರ ವಿಶೇಷ ಅನುದಾನದಡಿ ಬಿಬಿಎಂಪಿ ಪಾರ್ಕ್ಗಳಿಗೆ ಅಲಂಕಾರಿಕ ಗ್ರಿಲ್, ಜಿಮ್, ಮಕ್ಕಳ ಉಪಕರಣಗಳು, ಗ್ರಾನೈಟ್, ಬೆಂಚ್ಗಳು ಮತ್ತು ಇತರ ಅಭಿವೃದ್ಧಿ ಕಾರ್ಯಗಳನ್ನು ಒದಗಿಸುವ ಪೂಜಾ ಕಾರ್ಯಕ್ರಮಗಳಿಗೆ ಕೋರಮಂಗಲದ 8ನೇ ಬ್ಲಾಕ್ ಚಾಮುಂಡೇಶ್ವರಿ ಪಾರ್ಕ್ನಲ್ಲಿ ಚಾಲನೆ ನೀಡಿ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಕಳೆದ ಇಪ್ಪತ್ತು ವರ್ಷಗಳಿಂದ ಈ ಉದ್ಯಾನವಿದ್ದು, ಬಿಬಿಎಂಪಿ ವ್ಯಾಪ್ತಿ ಅಡಿ ಉದ್ಯಾನವನವನ್ನು ಉನ್ನತೀಕರಣಕ್ಕೋಸ್ಕರ ಸುಮಾರು 93 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಾಳಾದ ಪಾದಾಚಾರಿ ರಸ್ತೆ, ಮಳೆ ಬಂದರೆ ತೊಂದರೆಯಾಗದಂತೆ ಪಾರ್ಕ್ ಮೇಲ್ಟಾವಣಿ, ಗಜಬ್ ಸರಿಪಡಿಸುವುದು ಗ್ರಾನೆಟ್ ಅಳವಡಿಸಿ ಸಂಪೂರ್ಣ ಉದ್ಯಾನವನವನ್ನು ಹೈಟೆಕ್ ಆಗಿ ನಿರ್ಮಿಸಲಾಗುವುದು. ಒಟ್ಟಾರೆ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಈ ಎಲ್ಲಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರಿಂದ ಸ್ಥಳೀಯ ಹಿರಿಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
Disclaimer: This Story is auto-aggregated by a Syndicated Feed and has not been Created or Edited By City Big News Staff.