ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅವರಿಗೆ ಮಾಡಲು ಯಾವುದೇ ಕೆಲಸ ಇಲ್ಲ ಹಾಗಾಗಿ ನಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಸಾರ್ವಜನಿಕರ ಮನಸ್ಸಲ್ಲಿ ಅಪನಂಬಿಕೆ ಹುಟ್ಟುಸುತ್ತಿದ್ದಾರೆ ಎಂದು ಸಚಿವ ಹೆಚ್ಸಿ ಮಹದೇವಪ್ಪ ಅವರು ತಿರುಗೇಟು ಕೊಟ್ಟಿದ್ದಾರೆ.
ಇನ್ನು ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡುವ ಪ್ರಯತ್ನದಲ್ಲಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಸರಿಯಾಗಿ ಅಧಿಕಾರ ಮಾಡಲಿಲ್ಲ. ಜನರು ಹಿಂದಿನ ನಮ್ಮ ಸಾಧನೆ ನೋಡಿ ಈಗ ನಮಗೆ ಅಧಿಕಾರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬರೊಬ್ಬರಿ 135 ಜನರನ್ನು ಗೆಲ್ಲಿಸಿದ್ದಾರೆ. ಇದರಿಂದ ಅವರ ವೈಪಲ್ಯ ಗೊತ್ತಾಗುತ್ತಿದೆಯೆಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದು ಕೇವಲ 3 ತಿಂಗಳು ಮಾತ್ರ ಆಗಿದೆ. ಹೀಗಾಗಿ ಜನರ ಮುಂದೆ ಹೇಳಿಕೊಳ್ಳಲು ಅವರಿಗೆ ಏನೂ ಇಲ್ಲ. ಇದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆದು ಅಪನಂಬಿಕೆ ಬರುವಂತೆ ಮಾಡುತ್ತಿದ್ದು, ಅದು ಆಗಲ್ಲ. ಮೇಲ್ನೋಟಕ್ಕೆ ಅವರಿಗೆ ಹೊಟ್ಟೆ ಹುರಿ ಆಗಿದೆ. ಇನ್ನು ಕೇಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬೇರೆ ಹತ್ತಿರ ಬರುತ್ತಿದೆ. ಅವರಿಗೆ ಮಾತನಾಡಲು ಬೇರೆ ವಿಷಯವಿಲ್ಲ ಎಂದು ಹೇಳಿದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.