ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿವಾರಿಸಲು ಈಗಾಗಲೇ ʼನಮ್ಮ ಮೆಟ್ರೋʼ ಬೆಂಗಳೂರಿನ ಸುತ್ತಮುತ್ತ ಸಂಚಾರವನ್ನು ಪ್ರಾರಂಭಿಸಿದ್ದು ಇದರ ಬೆನ್ನೆಲ್ಲೇ ಮೆಟ್ರೋ ಪ್ರಯಾಣಿಕರಿಗೆ ಸಹಾಯವಾಗಲೆಂದು ಬಿಎಂಟಿಸಿಯು ಹೆಚ್ಚುವರಿ ಬಸ್ ಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ.
ಹೌದು, ಮೆಟ್ರೋ ನಿಲ್ದಾಣಗಳನ್ನು ಪ್ರಯಾಣಿಕರು ತಲುಪಲು ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆ ಮಾಡಿದೆ. ಒಟ್ಟು 37 ಫೀಡರ್ ಬಸ್ಗಳಿಗೆ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿ, ಕೆಆರ್ ಪುರ ನಿಲ್ದಾಣಕ್ಕೆ 37 ಬಿಎಂಟಿಸಿ ಫೀಡರ್ ಬಸ್ ವ್ಯವಸ್ಥೆ ಮಾಡಿದ್ದೇವೆ. ಅಕ್ಟೋಬರ್ 9ರ ಸೋಮವಾರದಿಂದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು ಚಲಘಟ್ಟ-ಕೆಂಗೇರಿ ನಡುವೆ ಮೆಟ್ರೋ ರೈಲುಗಳ ಸಂಚಾರವನ್ನು ಆರಂಭವಾಗಿದೆ. ಇದೀಗ ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಹೆಚ್ಚಿಸಿದೆ ಎಂದರು.
ವಿವಿಧ ಪ್ರದೇಶಗಳಿಂದ 37 ಹೊಸ ಬಿಎಂಟಿಸಿ ಬಸ್ಗಳು ಕೆಆರ್ ಪುರ ನಮ್ಮ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುತ್ತವೆ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಇತರೆ ಪ್ರದೇಶಗಳಿಂದ ಕೆಆರ್ ಪುರದ ಮೆಟ್ರೋ ನಿಲ್ದಾಣ ಸಂಪರ್ಕಿಸಲು ಮೆಟ್ರೋ ಫೀಡರ್ ಬಸ್ ಸಂಚರಿಸಲಿವೆ. ಕೆಆರ್ ಪುರ ಮೆಟ್ರೋ ನಿಲ್ದಾಣ-ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ 22 ಬಸ್ಗಳು ಸಂಚಾರಿಸಲಿವೆ.
ಎರಡು ಹೊಸ ಮಾರ್ಗದಲ್ಲಿ ಬಸ್
ಬಿಎಂಟಿಸಿ ಎರಡು ಹೊಸ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಕೆಆರ್ ಪುರ ಮೆಟ್ರೋ ನಿಲ್ದಾಣ- ಸಿಲ್ಕ್ ಬೋರ್ಡ್ ಜಂಕ್ಷನ್, ಕೆಆರ್ ಪುರ ಮೆಟ್ರೋ ನಿಲ್ದಾಣ-ಕೆಆರ್ ಪುರ ಮೆಟ್ರೋ ನಿಲ್ದಾಣ ನಡುವೆ ಬಸ್ ಸಂಚಾರ ನಡೆಸಲಿದೆ.
ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಎಂಟು ಬಸ್ಗಳು, ಕಾಡುಗೋಡಿಯಿಂದ ನಾಲ್ಕು ಮತ್ತು ಕಾಡುಗೋಡಿಯಿಂದ ಬೇರೆ ಮಾರ್ಗದಿಂದ ನಾಲ್ಕು ಬಸ್ಗಳು ಕಾರ್ಯನಿರ್ವಹಿಸಲಿವೆ. ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಹೊರಟು ಮಹದೇವಪುರ, ಮಾರತ್ತಹಳ್ಳಿ ಸೇತುವೆ, ಕಾಡುಬೀಸನಹಳ್ಳಿ, ಅಗರ ಮೂಲಕ ಸಂಚರಿಸಿ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪಲಿವೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.