ಯೋಗ ಗುರು ಬಾಬಾ ರಾಮ್ ದೇವ್ ತಮ್ಮ ಹೇಳಿಕೆಯೊಂದರಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆಗಾಗ ತಮ್ಮ ಹೇಳಿಕೆಯ ಮೂಲಕವೇ ಜನರ ಗಮನವನ್ನು ಸೆಳೆಯುವ, ಕೆಲವೊಮ್ಮೆ ತಮ್ಮ ಹೇಳಿಕೆಗಳ ಮೂಲಕವೇ ಚರ್ಚೆಗಳನ್ನು ಹುಟ್ಟು ಹಾಕುವ ಬಾಬಾ ರಾಮ್ ದೇವ್ ಅವರು, ಈ ಬಾರಿ ಮೊಬೈಲ್ ಫೋನ್ ಗಳು ಹಾಗೂ ದಿನ ನಿತ್ಯ ನಾವು ಬಳಸುವ ಕೆಲವು ವಿದ್ಯುತ್ ಉಪಕರಣಗಳು ಹೊರ ಹೊಮ್ಮಿಸುವ ರೆಡಿಯೇಷನ್ ಬಗ್ಗೆ ಅವರು ಮಾತನಾಡಿದ್ದು, ಈ ರೇಡಿಯೇಷನ್ ನಿಂದ ಪರಿಹಾರ ಪಡೆಯುವುದು ಹೇಗೆ? ಎಂಬ ಮಾರ್ಗವನ್ನು ಕೂಡಾ ಅವರು ಸೂಚಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿರುವ ಬಾಬಾ ರಾಮ್ ದೇವ್ ಅವರು ಮೊಬೈಲ್ ನಿಂದ ಹೊರ ಬರುವ ರೇಡಿಯೇಷನ್ ತಡೆಯ ಬೇಕಾದರೆ, ಮೊಬೈಲ್ ನ ಕವರ್​ನ ಹಿಂದೆ ತುಳಸಿ ದಳಗಳನ್ನು ಇಟ್ಟು ಕೊಳ್ಳಬೇಕೆಂದು ಪರಿಹಾರೋಪಾಯವನ್ನು ತಿಳಿಸಿದ್ದಾರೆ. ಹೀಗೆ ತುಳಸಿ ದಳವನ್ನು ಇಡುವುದರಿಂದ ನಾವು ಮೊಬೈಲ್ ಹೊರಸೂಸುವ ರೇಡಿಯೇಷನ್​ನಿಂದ ರಕ್ಷಣೆ ಪಡೆಯಬಹುದು ಎಂಬುದಾಗಿ ಯೋಗಗುರು ಬಾಬಾ ರಾಮದೇವ್ ಅವರು ಸಲಹೆಯೊಂದನ್ನು ನೀಡಿದ್ದಾರೆ.

ಉಡುಪಿಯ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಯೋಗ ಶಿಬಿರದಲ್ಲಿ ಭಾಗವಹಿಸಿರುವ ಬಾಬಾ ರಾಮ್ ದೇವ್ ಅವರು ಪಾಲ್ಗೊಂಡಿರುವ ಅವರು, ಮನೆಯಲ್ಲಿರುವ ನಿತ್ಯ ಬಳಕೆಯಾಗುವ ಟಿವಿ, ಲ್ಯಾಪ್​ಟಾಪ್, ಮೊಬೈಲ್ ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಕೂಡಾ ವಿಕಿರಣಗಳನ್ನು ಹೊರಹಾಕುತ್ತವೆ ಎಂದಿದ್ದು, ಇದರಿಂದ ರಕ್ಷಣೆ ಬೇಕಾದಲ್ಲಿ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಿ ಎಂದು ಸಲಹೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here