ಫೋನ್‌ ಕೈಯಲ್ಲಿದ್ದರೆ ಸಾಕು ಎದುರಿಗೆ ಏನೇ ಬಂದರೂ ಗೊತ್ತಾಗೊಲ್ಲ ಅಂತ ಸಾಮಾನ್ಯವಾಗಿ ಬೈಯುವುದನ್ನು ಕೇಳಿರುತ್ತೇವೆ. ಇದಕ್ಕೆ ತಕ್ಕಂತೆ ವಿಚಿತ್ರ ಘಟನೆಯೊಂದರಲ್ಲಿ, ಫೋನ್‌ನಲ್ಲಿ ಮಾತನಾಡುತ್ತ ಮಹಿಳೆಯೊಬ್ಬರು ಜೋಡಿ ಹಾವುಗಳ ಮೇಲೆ ಕುಳಿತು ಪ್ರಾಣ ಕಳೆದುಕೊಂಡ ಘಟನೆ ಗೋರಖ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಥೈಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿರುವ ಜೈ ಸಿಂಗ್ ಯಾದವ್ ಅವರ ಪತ್ನಿ ಗೀತಾ ತನ್ನ ಪತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ನೋಡದೆ ಹಾಸಿಗೆಯ ಮೇಲಿದ್ದ ಜೋಡಿ ಹಾವುಗಳ ಮೇಲೆ ಮಹಿಳೆ ಕುಳಿತಿದ್ದಾರೆ. ಬಳಿಕ ಮಹಿಳೆಗೆ ಹಾವು ಕಚ್ಚಿದ್ದು, ಸ್ವಲ್ಪ ಸಮಯದಲ್ಲೇ ಅವರು ಸಾವನ್ನಪ್ಪಿದ್ದಾರೆ.

ಗೀತಾ ಫೋನ್‌ನಲ್ಲಿ ಮಾತನಾಡುವಾಗ ಕೋಣೆಗೆ ಬಂದು ಹಾವುಗಳನ್ನು ನೋಡದೆ ಹಾಸಿಗೆಯ ಮೇಲೆ ಕುಳಿತಿದ್ದಾರೆ. ಹಾಸಿಗೆ ಮೇಲೆ ಪ್ರಿಂಟೆಡ್ ಬೆಡ್ ಶೀಟ್ ಹಾಕಿದ್ದರಿಂದ ಹಾವಿರುವುದು ಆಕೆಗೆ ತಿಳಿಯಲಿಲ್ಲ. ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಅವಳು ಮೂರ್ಛೆ ಹೋದಳು. ತಕ್ಷಣ ಗೀತಾಳನ್ನು ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here