ದೇಶ ರಕ್ಷಣೆಗೆ ನಮ್ಮ ಯೋಧರು ಉಗ್ರರನ್ನು ಹೊಡೆದುರುಳಿಸಲು ಚುನಾವಣಾ ಆಯೋಗದ ಅನುಮತಿ ಕೇಳಬೇಕಾ? ಪ್ರತಿಪಕ್ಷಗಳು ಎಂತಹ ನಾಟಕ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುಡುಗಿದ್ದಾರೆ.ಉತ್ತರ ಪ್ರದೇಶದ ಖುಷಿನಗರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಶೋಷಿಯಾನ್‌ನಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನ್ನು ಉಲ್ಲೇಖಿಸಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಆದರೆ ಸೈನಿಕರು ಉಗ್ರರ ಏನ್‌ಕೌಂಟರ್ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಹೇಳುತ್ತಿವೆ. ಹಾಗಾದರೆ ಯೋಧರು ಉಗ್ರರನ್ನು ಸದೆಬಡಿಯಲು ಚುನಾವಣಾ ಆಯೋಗದ ಅನುಮತಿ ಕೇಳುವ ಅಗತ್ಯವಿದೆಯೇ ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಎಸ್ಪಿ,ಬಿಎಸ್ಪಿ ವಿರುದ್ಧವೂ ಟೀಕೆ ಮಾಡಿದ ಮೋದಿ, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಗಿಂತ ಹೆಚ್ಚಿನ ಅವಧಿಗೆ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆದರೆ ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಕರಿನೆರಳಿಲ್ಲ ಎಂದು ತಿರುಗೇಟು ಕೊಟ್ಟರು.
ರಾಜಸ್ಥಾನದ ಅಲ್ವಾರ್ ಗ್ಯಾಂಗ್ ರೇಪ್ ಪ್ರಸ್ತಾಪಿಸಿ ಮಾಯಾವತಿಯವರೇ, ನೀವು ಮೊಸಳೆ ಕಣ್ಣೀರು ಹಾಕಬೇಡಿ. ಮಹಿಳೆಗೆ ನ್ಯಾಯ ದೊರಕಿಸಬೇಕೆಂದು ನಿಮಗೆ ನಿಜಕ್ಕೂ ಮನಸ್ಸಿದ್ದರೆ, ನೀವು ರಾಜಸ್ಥಾನದಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಹಿಂಪಡೆಯಿರಿ ಎಂದು ಸವಾಲೆಸೆದರು.

ನಮ್ಮ ಸರ್ಕಾರ ಕಾಶ್ಮೀರದಲ್ಲಿ ಆಯ್ಕೆಯಾದ ಸಮಯದಿಂದಲೂ, ಪ್ರತಿ ದಿನವೂ ಶುಚಿಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇದು ನನ್ನ ಕೆಲಸದ ಒಂದು ಭಾಗವಾಗಿದೆ ಎಂದೂ ಪ್ರಧಾನಿ ಹೇಳಿದರು.
ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಪ್ರಚಾರದ ಭಾಷಣಗಳಲ್ಲಿ ಮೋದಿ ಭಾರತೀಯ ಸೈನ್ಯವನ್ನು ಉಲ್ಲೇಖಿಸುತ್ತಿದ್ದಾರೆ ಎಂದು ದೂರು ನೀಡಿದ್ದರೂ, ಚುನಾವಣಾ ಆಯೋಗ ಪ್ರಧಾನಿ ಮೋದಿ ಗೆ ಕ್ಲೀನ್ ಚಿಟ್ ನೀಡಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here