ನಿನ್ನೆ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್  ಅವರು ಅಮೆರಿಕಾಗೆ ಭೇಟಿ ನೀಡಿದ್ದರು.  ಆದರೆ ಇಮ್ರಾನ್ ಖಾನ್ ಅವರು ಭೇಟಿ ನೀಡಿದಾಗ ಅವರನ್ನು ಬರಮಾಡಿಕೊಳ್ಳಲು ಅಮೇರಿಕಾದ ಯಾವುದೇ ಪ್ರಭಾವಿ ವ್ಯಕ್ತಿ ಸಹ ಬಂದಿಲ್ಲದಿರುವುದು ಇಮ್ರಾನ್ ಖಾನ್ ಅವರಿಗೆ ಅಮೆರಿಕದಲ್ಲಿ ಸಿಕ್ಕ ಗೌರವದ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಅಪಹಾಸ್ಯ ವಾಗಿ ಇಮ್ರಾನ್ ಗೆ ಕಾಲೆಳಿದಿದ್ದಾರೆ.
ಇಮ್ರಾನ್ ಖಾನ್ ಬಂದಿಳಿದಾಗ ಅವರಿಗೆ ಹಾಸಲಾಗಿದ್ದ ರೆಡ್ ಕಾರ್ಪೆಟ್ ಸಹ ಚಿಕ್ಕದಾಗಿತ್ತು. ಕೆಲ ಅಧಿಕಾರಿಗಳು ಬರಿಗೈಯಲ್ಲಿ ಬಂದು ಔಪಚಾರಿಕವಾಗಿ ಇಮ್ರಾನ್ ಖಾನ್ ಅವರನ್ನು ಸ್ವಾಗತ ಮಾಡಿಕೊಂಡರು.

ಆದರೆ  ಶನಿವಾರ ಹ್ಯೂಸ್ಟನ್ ನಗರಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅದ್ಧೂರಿಯಾಗಿ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗಿತ್ತು. ಪ್ರತಿಷ್ಠಿತ ಹೌಡಿ ಮೋದಿ ಕಾರ್ಯಕ್ರಮಕ್ಕೆ ಸ್ವಾಗತಿಸಲು ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಕ್ರಿಸ್ಟೋಫರ್ ಓಲ್ಸನ್, ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡಿದ್ದರು.

ಸದ್ಯ ನೆಟ್ಟಿಗರು ಎರಡು ವಿಡಿಯೋಗಳನ್ನು ಸೇರಿಸಿ ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ. ಜುಲೈನಲ್ಲಿ ಯುಸ್ ಗೆ ಮೊದಲ ಬಾರಿ ಜುಲೈನಲ್ಲಿ ಭೇಟಿ ನೀಡಿದ್ದರು. ಅಂದು ಸಹ ಇಮ್ರಾನ್ ಖಾನ್ ಸ್ವಾಗತಕ್ಕೆ ಯಾವ ಹಿರಿಯ ಅಧಿಕಾರಿಗಳು ಬಂದಿರಲಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here