ಶಾಸಕರು ತಮ್ಮ ನಾಲಗೆ ಹರಿ ಬಿಡುವುದರಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆ ಇಲ್ಲ ಎಂಬಂತೆ ಸ್ಪರ್ಧೆಗೆ ಬಿದ್ದವರಂತೆ ಹೇಳಿಕೆಗಳನ್ನು ನೀಡುತ್ತಾ, ತಮ್ಮ ವಿರೋಧಿಗಳ ಟೀಕೆ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ಈಗ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ಬಗ್ಗೆ ತಮ್ಮ ಟೀಕಾ ಪ್ರಹಾರ ಮಾಡಿದ್ದಾರೆ. ಅವರು ಮೋದಿ ನೇಣಿಗೇರಲು ಸಿದ್ಧವಾದ್ರೆ ರಸ್ತೆ ರೆಡಿ ಮಾಡಿಕೊಡುತ್ತೇವೆ ಎಂಬ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಿಂಚೋಳಿ ಕ್ಷೇತ್ರದಲ್ಲಿನ ಶಾದಿಪುರ ಗ್ರಾಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಮಾನ್ಯ ಸಚಿವರು ನೋಟ್ ಬ್ಯಾನ್ ಆದಾಗ ಅದರಿಂದ ಉಂಟಾದ ಪರಿಣಾಮಗಳು, 50 ದಿನದಲ್ಲಿ ಸರಿಯಾಗದೆ ಹೋದಲ್ಲಿ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ದರೆಂದು ಆ ವಿಷಯವನ್ನು ನೆನಪಿಸಿದ್ದಾರೆ.

 

ಅದನ್ನು ಅಲ್ಲಿಗೆ ಮೊಟಕುಗೊಳಿಸದೆ ಮಾತು ಮುಂದುವರೆಸಿದ ಅವರು ಈಗಲೂ ಜನರ ಪರದಾಟ ತಪ್ಪಿಲ್ಲ. ಅದಕ್ಕೆ ಅವರು ಹೇಳಿದಂತೆ ಆಗಲಿ, ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಾಗಿದ್ದೇವೆ ಆದ್ರೆ ಮೋದಿ ಬರ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿಯ ಬಗ್ಗೆ ಕಟು ನುಡಿಗಳನ್ನು ಆಡಿರುವ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಬ್ಯಾಟಿಂಗ್ ಮಾಡಿದ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಕ್ಷಮೆಗೆ ಆಗ್ರಹಿಸುವುದಲ್ಲ, ಅದಕ್ಕೂ ಮೊದಲು ಮೋದಿ ಸೇರಿ ಬಿಜೆಪಿ ನಾಯಕರು ಕ್ಷಮೆ ಕೇಳಬೇಕಾಗಿದೆ ಎಂದಿದ್ದಾರೆ.

ಬಿಜೆಪಿಯವರು ಯಾವಾಗಲೂ ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಟೀಕಿಸುವರು ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಮಹತ್ವದ್ದು, ಆಗ ಮೋದಿ ಹುಟ್ಟಿರಲೇ ಇಲ್ಲ, ಆತ ನನಗಿಂತ ಆರು ವರ್ಷ ಚಿಕ್ಕವನು, ಕಾಂಗ್ರೆಸ್ ಗೆ 40 ಸೀಟು ಬಂದರೆ ಮೋದಿ ದೆಹಲಿಯ ವಿಜಯ್ ಚೌಕ್ ನಲ್ಲಿ ನೇಣು ಹಾಕಿಕೊಳ್ಳುವನಾ ? ಎಂದೆಲ್ಲಾ ಏಕವಚನದಲ್ಲಿ ನಿಂದನೆ ಮಾಡಿ, ಅವರ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here