ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು‌ ಪ್ರಧಾನಿ ಮೋದಿಯವರ ವಿರುದ್ಧ ಗುಡುಗಿದ್ದಾರೆ. ಅವರು ಮಾತನಾಡುತ್ತಾ ಮೋದಿಗೆ ದೇಶ ನಡೆಸುವುದಕ್ಕೆ ಆಗಲ್ಲ ಅಂದರೆ ಸಿದ್ಧರಾಮಯ್ಯನವರಿಗೆ ಬಿಟ್ಟು ಕೊಡಲಿ. ಅವರಿಗೆ ದೇಶವನ್ನು ನಡೆಸುವ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಭಾರತದ ರೂಪಾಯಿ ಬೆಲೆಯು ಇಳಿಮುಖವಾಗುತ್ತಿದ್ದು ಇದು ಭಾರತ ಮಾತೆಗೆ ಅವಮಾನವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಇದೇ ಸಮಯದಲ್ಲಿ ಅವರು ಸಿದ್ಧರಾಮಯ್ಯನವರ ಪರವಾಗಿ ಕೆಲವು ವಿಷಯಗಳನ್ನು ಮಾತನಾಡಿದ್ದಾರೆ.

ಸಿದ್ಧರಾಮಯ್ಯನವರಿಗೆ‌ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ಸೋಲು ಒಂದು ಆಕಸ್ಮಿಕ ಅಷ್ಟೇ ಎಂದಿರುವ ಅವರು ಅದನ್ನು‌‌ ಒಂದು ಕೆಟ್ಟ ಕನಸು ಎಂದು ಮರೆತು ಬಿಡಿ ಎಂದು ಹೇಳಿದ್ದಾರೆ. ಅಲ್ಲದೆ ಇದು ಸೋಲಿನಿಂದ ಬಂದ ಹೊಡೆತ ಇದು. ಅವರನ್ನು ಸೋಲಿನ ಹೊಡೆತದ ಇಂದ ಹೊರ ತರುವ ಜವಾಬ್ದಾರಿ ನಮ್ಮದು. ಅಲ್ಲದೆ ಹಿಂದೊಮ್ಮೆ‌ ನಾನು ಮತ್ತು ನಜೀರ್ ಅಹ್ಮದ್ ಅವರು ಸಿದ್ಧರಾಮಯ್ಯನವರನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಕೇಳಿಕೊಂಡಿದ್ದೆವು ಆದರೆ ಅವರು ಬರಲಿಲ್ಲ ಎಂದು ಅವರು ಹೇಳಿದರೆಂದು ಹಿಂದಿನದನ್ನು ನೆನಪಿಸಿಕೊಂಡಿದ್ದಾರೆ ರಮೇಶ್ ಕುಮಾರ್ ಅವರು.

ಸಿದ್ಧರಾಮಯ್ಯನವರು‌ ಬೆಳಸಿದವರೇ ಇಂದು ಅವರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದಿದ್ದಾರೆ ರಮೇಶ್ ಕುಮಾರ್ ಅವರು. ನಿನ್ನೆಯಷ್ಟೇ ರಮೇಶ್ ಕುಮಾರ್ ಅವರು ಎಂಟಿಬಿ ನಾಗರಾಜ್ ಅವರ ವಿರುದ್ಧ ಕೂಡಾ ತೀವ್ರ ವಾಗ್ದಾಳಿಯನ್ನು ನಡೆಸಿದ್ದರು. ಅದರ ಬೆನ್ನಲ್ಲೇ ಈಗ ಮೋದಿಯವರನ್ನು ಕುರಿತಾಗಿ ಟೀಕೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here