ಜಮ್ಮು ಮತ್ತು ಕಾಶ್ಮಿರಕ್ಕೆ ನೀಡಿದ್ದ 370 ನೇ ವಿಧಿ ರದ್ದು ಪಡಿಸಿದ ನಂತರ ಮೊದಲ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರವನ್ನು ಐತಿಹಾಸಿಕ ಎಂದು ಕರೆದರು.’370 ನೇ ವಿಧಿಯನ್ನು ರದ್ದುಗೊಳಿಸುವುದರೊಂದಿಗೆ, ದೇಶವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಸರ್ದಾರ್ ಪಟೇಲ್ ಅವರ ಕನಸುಗಳು ನನಸಾಗಿವೆ’ ಎಂದು ಪ್ರಧಾನಿ ಹೇಳಿದರು. ಕಾಶ್ಮೀರದಲ್ಲಿ 370 ನೇ ವಿಧಿ ಭಯೋತ್ಪಾದನೆ, ನಿಧಾನಗತಿಯ ಅಭಿವೃದ್ಧಿ, ಕುಟುಂಬ ಆಧಾರಿತ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಮಾತ್ರ ಪ್ರೋತ್ಸಾಹಿಸಿತು. 370 ಹಾಗೂ 35 (ಎ ) ಕಲಂಗಳು ಕಣಿವೆಯಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸಿ ಪಾಕ್ ಮೂಲಕ ರಾಷ್ಟ್ರ ವಿರೋಧಿ ಭಾವನೆಗಳನ್ನು ಸೃಷ್ಟಿಮಾಡಿದ್ದವು.

ಇದರಿಂದಾಗಿ ಸುಮಾರು 42,000 ಮುಗ್ಧ ಜನರಲ್ಲಿ ಸಾಯಬೇಕಾಗಿತ್ತು ಎನ್ನುವ ಈ ಅಂಕಿ ಅಂಶವು ಯಾರ ಕಣ್ಣಲ್ಲಾದರೂ ನೀರನ್ನು ತರಿಸುತ್ತದೆ ಎಂದು ಹೇಳಿದರು. 370 ನೇ ವಿಧಿ ರದ್ದತಿಯನ್ನು ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಇದು ಜಮ್ಮು ಮತ್ತು ಕಾಶ್ಮೀರದ ಜನರನ್ನು ರಕ್ಷಿಸುತ್ತಿಲ್ಲ ಎಂದು ಹೇಳಿದರು. ‘370ನೇ ವಿಧಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೇಗೆ ಪ್ರಯೋಜನವಾಯಿತು ಎಂದು ಯಾರೂ ಹೇಳಲಾರರು, ಆದರೆ ಕಲಂನಿಂದಾಗಿ ರಾಜ್ಯದಲ್ಲಿ ಪ್ರತ್ಯೇಕತಾವಾದ, ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಕುಟುಂಬ ಆಡಳಿತ ಬೆಳೆಯಿತೆ ಹೊರತು ಮತ್ತೇನಲ್ಲ ಎಂದು ಹೇಳಿದರು. ಇದೇ ವೇಳೆ ಮುಂಬರುವ ದಿನಗಳಲ್ಲಿ ಪಾರದರ್ಶಕ ಹಾಗೂ ಮುಕ್ತ ವಿಧಾನಸಭೆ ಚುನಾವಣೆಯ ಭರವಸೆಯನ್ನು ಪ್ರಧಾನಿ ನೀಡಿದರು. ಲಡಾಖ್ ಮತ್ತು ಜಮ್ಮು ಕಾಶ್ಮೀರ ಜಗತ್ತಿನ ಪ್ರಮುಖ ಪ್ರವಾಸಿ ತಾಣವಾಗುವ ಸಾಮರ್ಥ್ಯದ ಬಗ್ಗೆ ಮೋದಿ ಭರವಸೆ ವ್ಯಕ್ತಪಡಿಸಿದರು. ಜಮ್ಮು-ಕಾಶ್ಮೀರದಲ್ಲಿ ಕೆಲವು ಯೋಜನೆಗಳು ಕಾಗದಲ್ಲಿ ಮಾತ್ರ ಇದ್ದವು. ಇನ್ನು ಮುಂದೆ ಕೇಂದ್ರ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲಿದೆ. ಐಐಟಿ, ಏಮ್ಸ್, ರೈಲ್ವೇ ಸಂಪರ್ಕ, ಭ್ರಷ್ಟಾಚಾರ ನಿಗ್ರಹ ದಳ, ವಿಮಾನ ನಿಲ್ದಾಣ ಅಭಿವೃದ್ಧಿ ಹಂತ ಹಂತವಾಗಿ ಕಾರ್ಯಗತಗೊಳ್ಳಲಿದೆ. ನಿಮ್ಮ ಜನಪ್ರತಿನಿಧಿಯನ್ನು ನೀವೇ ಆಯ್ಕೆ ಮಾಡಬೇಕು.

ನಿಮ್ಮಿಂದಲೇ ಅವರು ಅಧಿಕಾರಕ್ಕೆ ಬರಬೇಕು. ನಾವು ನೀವು ಸೇರಿ ಭಯೋತ್ಪಾದನೆ ಹಾಗೂ ಉಗ್ರವಾದವನ್ನು ಹಿಮ್ಮೆಟ್ಟಬೇಕಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗೋಣ ಕಾಶ್ಮೀರದ ಸೊಬಗನ್ನು ಜನತ್ತಿಗೆ ತೋರಿಸಲು ಪ್ರತಿಯೊಬ್ಬರು ಮುಂದಾಗಬೇಕಿದೆ. ಪ್ರತ್ಯೇಕವಾದಿಗಳು ಹಾಗೂ ಉಗ್ರವಾದಿಗಳಿಗೆ ಕಾಶ್ಮೀರಿಗಳೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಹಿಂದೆ ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್ ನಡೆಯುತಿತ್ತು. ಆದರೆ ಈಗ ಶೂಟಿಂಗ್ ನಡೆಯುತ್ತಿಲ್ಲ. ಇನ್ನು ಮುಂದೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ. ಜಮ್ಮು ಕಾಶ್ಮೀರ ಯುವಜನತೆಯಲ್ಲಿ ಎಲ್ಲ ಶಕ್ತಿ ಇದೆ. ಕಾಶ್ಮೀರದಲ್ಲಿ ಉತ್ತಮ ಕ್ರೀಡಾಪಟುಗಳು ತಯಾರಾಗಬೇಕು. ಇದಕ್ಕಾಗಿ ಉತ್ತಮ ಕ್ರೀಡಾಂಗಣವನ್ನು ತಯಾರು ಮಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here