ನಿನ್ನೆ ಲಂಡನ್ ನಲ್ಲಿ “ಭಾರತ್ ಕಿ ಬಾತ್ ಸಬ್ ಕೆ ಸಾತ್” ಸಂದರ್ಶನದಲ್ಲಿ ಸಂದರ್ಶಕ ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋದಿಯಿಂದ ಬರುತ್ತಿದ್ದ ಒಂದೊಂದು ಉತ್ತರವೂ ಅವರ ಮೇಲಿನ ಗೌರವವನ್ನು ನೂರ್ಮಡಿಗೊಳಿಸುತ್ತಿತ್ತು. ಭಾರತಮಾತೆಯ ಸುಪುತ್ರನ ಮಾತುಗಳನ್ನು ಕೇಳುತ್ತಾ ಅರಿವಿಲ್ಲದೆ  ದೇಶಭಕ್ತರಿಗೆ ಕಣ್ಣಿಂದ ಹನಿ ಜಾರುತ್ತಿತ್ತು. ಕೊನೆಯಲ್ಲಿ ಸಂದರ್ಶಕ ಕೇಳಿದ ಪ್ರಶ್ನೆ, “ಮೋದೀಜಿ ಇತಿಹಾಸದ ಪುಟಗಳಲ್ಲಿ ನಿಮ್ಮನ್ನು ಜನ ಹೇಗೆ ನೆನಪಿಸಿಕೊಳ್ಳಬೇಕೆಂದು ಬಯಸುವಿರಿ?” ಮೋದಿಜಿ ಒಂದು ಕ್ಷಣ ಮೌನ ತಳೆದು ನಂತರ ಸಭೆಯಲ್ಲಿದ್ದವರನ್ನೆ ಕೇಳಿದರು.”ಅದೆಷ್ಟೋ ಸಹಸ್ರ ವರ್ಷಗಳಿಂದ ವಿಶ್ವಕ್ಕೆ ಪಥವನ್ನು ತೋರಿಸುತ್ತಿರುವ ಅತ್ಯಂತ ಪುರಾತನ ಹಾಗೂ ಶ್ರೇಷ್ಟವಾದ ವೇದವನ್ನು ರಚಿಸಿದವರು ಯಾರೆಂದು ಯಾರಿಗಿದರೂ ನೆನಪಿದೆಯಾ?!” ಸಭೆ ಮೌನವಾಗಿತ್ತು. 

ಮುಂದುವರೆಯುತ್ತಾ ಮೋದೀಜಿ, “ಇಂತಹ ಶ್ರೇಷ್ಟ ಕೃತಿಯ ರಚನಾಕಾರರನ್ನೆ ನೆನಪಿಟ್ಟುಕೊಳ್ಳದ ಇತಿಹಾಸದಲ್ಲಿ ಮೋದಿ ಏನೂ ಅಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಷ್ಟೆ. ಇತಿಹಾಸದಲ್ಲಿ ಹೆಸರು ಮಾಡುವ ಉದ್ದೇಶದಿಂದ ಬಂದವನು ನಾನಲ್ಲ ಆ ಆಸೆಯೂ ಇಲ್ಲ. ಒಬ್ಬರಿಗೆ ಶಿಕ್ಷಕರ ಕೆಲಸ ಸಿಕ್ಕಿರಬಹುದು ಇನ್ನೊಬ್ಬರಿಗೆ ಚಾಲಕನ ಕೆಲಸ ಸಿಕ್ಕಿರಬಹುದು ಮತ್ತೊಬ್ಬ ವ್ಯಾಪಾರ ಮಾಡಬಹುದು ಅಂತೆಯೇ ನನಗೆ ನಿಮ್ಮ ಸೇವೆ ಮಾಡುವ ಪ್ರಧಾನ ಸೇವಕನ ಕೆಲಸ ಸಿಕ್ಕಿದೆಯಷ್ಟೆ ಇದಕ್ಕಿಂತಲೂ ಹೆಚ್ಚಿನದ್ದೇನೂ ಇಲ್ಲ.ಇತಿಹಾಸದಲ್ಲಿ ಅಮರನಾಗಲು ನಾನು ಇಷ್ಟ ಪಡುವುದೂ ಇಲ್ಲ. ಒಂದು ವೇಳೆ ಅಮರ ಆಗಬೇಕಿದ್ದರೆ ಅದು ನನ್ನ ದೇಶ ಅಜರಾಮರವಾಗಬೇಕು. ಜಗತ್ತು ನೆನಪಿಸುವಂತಿದ್ದರೆ ನನ್ನ ದೇಶವನ್ನು ನೆನೆಯಬೇಕು. ನನ್ನ ದೇಶದ ಭವಿಷ್ಯವನ್ನು ನೋಡಬೇಕು. ಜಗತ್ತು ನನ್ನ ದೇಶದ ಬಗ್ಗೆ ಇಡಿ ವಿಶ್ವಕ್ಕೆ ಮಾನವನ ಅಭಿವೃದ್ದಿಗೆ ದಾರಿ ತೋರಿಸುವ ವಿಶ್ವವನ್ನು ಸಂಕಷ್ಟದಿಂದ ಪಾರುಮಾಡಬಲ್ಲ ಸಾಮರ್ಥ್ಯವನ್ನು ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಬೇಕು. ಮೋದಿಯ ಹೆಸರಲ್ಲ ರಾಷ್ಟ್ರದ ಹೆಸರು ರಾರಾಜಿಸುವಂತೆ ಮಾಡಲು ಜೀವನ ಮುಡಿಪಾಗಿಡುತ್ತೇನೆ” ಇದನ್ನ ಕೇಳಿದ ದೇಶವಾಸಿಗಳ ದೇಶಭಕ್ತಿಯನ್ನು ಬಡಿದೆಬ್ಬಿಸಲು ಇದಿಷ್ಟು ಸಾಕಲ್ಲವೇನು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here