ಬೆಂಗಳೂರು: ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಅವರು ಇಂದು ಹೃದಯಘಾತದಿಂದ ನಿಧನವಾಗಿದ್ದಾರೆ ಎಂದು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಆದರೆ ರಮ್ಯಾ ಅವರು ಆರೋಗ್ಯವಾಗಿದ್ದು ಅವರು ವಿದೇಶಿ ಪ್ರಯಾಣದಲ್ಲಿ ಇದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಹೌದು, ಇಂದು ಬೆಳಗ್ಗೆ ಸ್ಯಾಂಡಲ್ವುಡ್ನ ಖ್ಯಾತ ನಟಿ, ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶಾಕಿಂಗ್ ಸುದ್ದಿ ಹರಿದಾಡಿತ್ತು. ಆದರೆ, ರಮ್ಯಾ ಅವರ ಆಪ್ತರು ಈ ಸುದ್ದಿಯನ್ನು ತಳ್ಳಿ ಹಾಕಿದ್ದು, ನಟಿ ಆರೋಗ್ಯವಾಗಿದ್ದಾರೆ. ಸದ್ಯ ಜಿನೆವಾ ಪ್ರವಾಸದಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ನಟಿ ರಮ್ಯಾ ತೀರಿಕೊಂಡಿದ್ದಾರೆ ಎಂಬ ವದಂತಿಯನ್ನು ನಂಬಿ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದರು. ಸುದ್ದಿಯನ್ನು ಖಚಿತ ಪಡಿಸಿಕೊಳ್ಳದೆ ಮಾಧ್ಯಮಗಳು ಕೂಡ ರಮ್ಯಾ ಸಾವಿನ ಸುದ್ದಿಯನ್ನು ಬಿತ್ತರಿಸಿದ್ದವು. ಅಸಲಿ ವಿಚಾರ ಬೆಳಕಿಗೆ ಬಂದ ನಂತರ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ.
ತಮಿಳುನಾಡಿನ ಕೆಲವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ನಟಿಯ ಅಗಲಿಕೆ ಸುದ್ದಿ ಸತ್ಯ ಎಂದು ತಿಳಿದು ಸಂತಾಪ ಸೂಚಿಸಿದ್ದರು.
ಬುಧವಾರ ಬೆಳಗ್ಗೆ ಸುಮಾರು 12 ಗಂಟೆಯಿಂದ ನಟಿ ರಮ್ಯಾ ಅವರ ನಿಧನ ಕುರಿತ ಸುದ್ದಿ ವೈರಲ್ ಆಗಿತ್ತು. ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಇದರಿಂದ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಸದ್ಯ ರಮ್ಯಾ ಅವರು ಜಿನೆವಾದಲ್ಲಿ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ರಮ್ಯಾ ಆಪ್ತೆ ಚಿತ್ರಾ ಸುಬ್ರಹ್ಮಣ್ಯ ಅವರು ಟ್ವೀಟ್ನಲ್ಲಿ ಅವರೊಂದಿಗಿನ ಫೋಟೋ ಹಂಚಿಕೊಂಡು ಇಬ್ಬರು ಜೊತೆಯಾಗಿ ರಾತ್ರಿ ಊಟ ಮಾಡಿದ್ದಾಗಿ ತಿಳಿಸಿದ್ದಾರೆ. ಸದ್ಯ ರಮ್ಯಾ ಜಿನೇವಾದಲ್ಲಿ ಕ್ಷೇಮವಾಗಿದ್ದು, ಇದೇ ವಾರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿಸಿದ್ದಾರೆ.
Wonderful meeting the very talented and genteel lady @divyaspandana for dinner in Geneva. We talked about many things including our love for Bangalore. pic.twitter.com/1kN5ybEHcD
— Chitra Subramaniam (@chitraSD) September 6, 2023
Disclaimer: This Story is auto-aggregated by a Syndicated Feed and has not been Created or Edited By City Big News Staff.