ಉದ್ಯಮಿ ಪುತ್ರ ವಿದ್ವತ್ ಮೇಲೆ ಘೋರವಾಗಿ ಹಲ್ಲೆಮಾಡಿ ಎಲ್ಲರ ಕೈಯಮದ ಚಿ ತು ಎಂದು ಉಗಿಸಿಕೊಂಡು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ ಶಾಂತಿನಗರ ಕಾಂಗ್ರೆಸ್ ಕೈ ಶಾಶಕ ಎನ್ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಜಾಮೀನು ವಿಚಾರಣೆ ಇಂದು ನಡೆದಿದ್ದು (ಅಂದರೆ ಮಾರ್ಚ್ 14 ಬುದವಾರದಂದು) ಮತ್ತೆ ಹೈಕೋರ್ಟ್‌ ಜಾಮೀನು ನೀಡಲು ನಿರಾಕರಿಸಿದೆ.


ಸಿಸಿಟಿವಿನಲ್ಲಿ ಹಲ್ಲೆ ನಡೆಸಿರೋದು ಸ್ಪಷ್ಟವಾಗಿದೆ. ತನಿಖಾಧಿಕಾರಿಗಳಿಗೆ ಸಿಗದ ಡಿಸ್ಚಾರ್ಜ್ ಸಮ್ಮರಿ ಆರೋಪಿಯ ತಂದೆಗೆ ಸಿಕ್ಕಿರುವುದು ಸಿಕ್ಕಿರೋದು ಅನುಮಾನ ಮೂಡುತ್ತದೆ ಅಂತ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ನಲಪಾಡ್ ಜಾಮೀನು ಅರ್ಜಿ ವಜಾಗೊಳಿಸಿದೆ.

ಇದರಿಂದಾಗಿ ಮೊಹಮದ್ ನಲಪಾಡ್ ಇಂದು ಜೈಲಿಂದ ಹೊರಬರುತ್ತಾರೆ ಎಂದು ಕನಸು ಕಾಣುತ್ತಿದ್ದ ಕಾಂಗ್ರೆಸ್ ಶಾಸಕ ಎನ್ ಹ್ಯಾರಿಸ್ ಅವರ ಕನಸು ನುಚ್ಚುನೂರಾಗಿದೆ.ಕಳೆದ ತಿಂಗಳು ಫೆಬ್ರವರಿ 17 ರಂದು ಹಲ್ಲೆಗೆ ಒಳಗಾಗಿದ್ದ ವಿದ್ವತ್ ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ. ಪ್ರಕರಣ ಸಂಭವಿಸಿದ ನಂತರ ನಾಪತ್ತೆಯಾಗಿದ್ದ ನಲಪಾಡ್ ನಂತರದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here