“ಬೆಳಗಿನ ಉಪಹಾರಕ್ಕೆ ಮೊಳಕೆ ಕಾಳುಗಳು ಬೆಸ್ಟ್

ಬೆಳಗ್ಗಿನ ಆಹಾರ ಬಹಳ ಮುಖ್ಯ. ಬೆಳಗ್ಗೆ ಸರಿಯಾಗಿ ಉಪಹಾರ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಅದೆಷ್ಟೋ ಮಂದಿ ಸುಲಭ, ಸರಳ ಆಹಾರ ಬ್ರೆಡ್, ಬಟರ್ ಮೊರೆ ಹೋಗ್ತಾ ಇದ್ದಾರೆ. ಇದರ ಬದಲು, ಮೊಳಕೆ ಧಾನ್ಯಗಳ ಸೇವನೆ ಶುರು ಮಾಡಿದರೆ ಅನೇಕ ಲಾಭ ಪಡೆಯಬಹುದು.

ಮೊಳಕೆಯೊಡೆದ ಧಾನ್ಯಗಳಿಂದ ಅನೇಕ ಪ್ರಯೋಜನಗಳಿವೆ.

1. ಬೆಳಗ್ಗೆ ಪೌಷ್ಠಿಕ ಆಹಾರ ಬೇಕು. ಇದಕ್ಕೆ ಮೊಳಕೆಯೊಡೆದ ಧಾನ್ಯ ಹೇಳಿ ಮಾಡಿಸಿದಂತಹದ್ದು. ಪ್ರತಿದಿನ ಬೇರೆ ಬೇರೆ ಕಾಳುಗಳನ್ನು ನೆನೆಸಿ ನೀವು ತಿನ್ನಬಹುದು. ಇದರಿಂದ ನಿಮಗೆ ವೆರೈಟಿ ಸಿಗುವ ಜೊತೆ ಜೊತೆಯಲ್ಲೇ ಪ್ರೋಟಿನ್ ಹಾಗೂ ಪೋಷಕಾಂಶಗಳು ಸಾಕಷ್ಟು ಸಿಗುತ್ತವೆ.

2. ಮೊಳಕೆ ಕಾಳುಗಳ ಸೇವನೆಯಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅವುಗಳಲ್ಲಿ ಫೈಬರ್ ಅಂಶ ಜಾಸ್ತಿಯಿದ್ದು, ಅವು ಪಚನಕ್ರಿಯೆಯನ್ನು ಸುಲಭ ಮಾಡುತ್ತವೆ.

3. ಮೊಳಕೆ ಧಾನ್ಯಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಎ, ಬಿ, ಸಿ ಮತ್ತು ಇ ಹೇರಳವಾಗಿರುತ್ತದೆ.

4. ಮೊಳಕೆ ಧಾನ್ಯಗಳು ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಸ್ನಾಯುಗಳು ಬಲವಾಗಲು ಕಾರಣವಾಗುತ್ತವೆ.

5. ಮೊಳಕೆ ಕಾಳುಗಳು ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿವೆ. ಹಾಗಾಗಿ ಅವುಗಳ ಸೇವನೆಯಿಂದ ತೂಕ ಕಡಿಮೆಯಾಗುತ್ತದೆ.

ಕೃಪೆ : ವಾಟ್ಸಪ್

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here