ಜೊತೆ ಜೊತೆಯಲಿ ಧಾರಾವಾಹಿಯ ಕುರಿತು ಹೇಳಲು ಸಾಕಷ್ಟು ವಿಷಯಗಳಿವೆ. ದಿನ ಪ್ರತಿದಿನ ಒಂದಲ್ಲಾ ಒಂದು ವಿಷಯದಿಂದ ಮಾದ್ಯಮಗಳಲ್ಲಿ ಸುದ್ದಿಯಾಗುತ್ತದೆ ಜೊತೆ ಜೊತೆಯಲಿ. ಒಂದು ಸೂಪರ್ ಹಿಟ್ ಸಿನಿಮಾಕ್ಕೆ ಇರುವಷ್ಟು ಕ್ರೇಜ್ ಇದೆ ಜೊತೆ ಜೊತೆಯಲಿ ಧಾರಾವಾಹಿಗೆ‌. ಈ ಧಾರಾವಾಹಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಧಾರಾವಾಹಿಯ ಟೈಟಲ್ ಸಾಂಗ್‌. ಈ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಎಲ್ಲರ ಫೇವರಿಟ್ ಹಾಡು ಕೂಡಾ ಆಗಿದೆ. ಹಾಗಾದರೆ ಇಂತಹ ಮನಮೋಹಕ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಯಾರೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ವಿನಯ್ ರಾಜ್‍ಕುಮಾರ್ ಅವರ ಅನಂತು ವರ್ಸಸ್ ನುಸ್ರತ್ ಸಿನಿಮಾದ ಹಾಡುಗಳು ಎಲ್ಲರಿಗೂ ಪರಿಚಿತ. ಅದ್ಭುತವಾದ ಹಾಗೂ ಇಂಪಾದ ಹಾಡುಗಳಿಗೆ ಅಲ್ಲಿ ಸಂಗೀತ ಸಂಯೋಜನೆ ಮಾಡಿದ ಅದೇ ಸಂಗೀತ ನಿರ್ದೇಶಕ, ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಚಿರಪರಿಚಿತರಾಗಿರುವ ಸುನಾದ್ ಗೌತಮ್. ಇದೇ ಸಂಗೀತ ನಿರ್ದೇಶಕನ ನಾದ ಸಂಯೋಜನೆಯಲ್ಲಿ ಮೂಡಿ ಬಂದಿದೆ ಜೊತೆ ಜೊತೆಯಲಿ ಧಾರಾವಾಹಿಯ ಟೈಟಲ್ ಸಾಂಗ್. ಈ ಹಾಡನ್ನು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎನಿಸುವಷ್ಟು ಇಂಪಾಗಿದೆ.

ಈ ಹಾಡಿಗೆ ಧ್ವನಿಯನ್ನು ನೀಡಿರುವವರು ಸುನಾದ್ ಅವರ ಸಹೋದರಿ ನಿನಾದ ನಾಯಕ್ ಅವರು. ಮೇಲ್ ವರ್ಷನ್ ಹಾಡಿರುವವರು ನಿಹಾಲ್ ತಾವ್ರೋ ಮತ್ತು ರಜತ್ ಹೆಗಡೆ ಅವರು. ಈ ಮೂವರ ಧ್ವನಿಯಲ್ಲಿ ಸುನಾದ್ ಅವರ ಸಂಗೀತದಲ್ಲಿ ಒಂದು ಮಧುರವಾದ ಹಾಡಾಗಿ ಮೂಡಿ ಬಂದಿದೆ ಜೊತೆ ಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಹಾಡು‌. ಈಗಾಗಲೇ ಈ ಹಾಡು ಹಲವರ ಮೊಬೈಲ್ ಫೋನ್ ಗಳಲ್ಲಿ ಕಾಲರ್ ಟ್ಯೂನ್ ಆಗಿ, ರಿಂಗ್ ಟೋನ್ ಆಗಿ ಕೂಡಾ ಸದ್ದು ಮಾಡಿದೆ‌. ಒಟ್ಟಾರೆ ಒಂದು ಸಿನಿಮಾ ಹಾಡಷ್ಟೇ ಜನಪ್ರಿಯವಾಗಿದೆ ಜೊತೆ ಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಹಾಡು.

https://m.facebook.com/story.php?story_fbid=2403074843133320&id=378024258971732

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here