ತಾಯಿಯ ಹುಟ್ಟು ಹಬ್ಬಕ್ಕಾಗಿ ಒಂದೊಳ್ಳೆ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾನೆ ಯುವಕನೊಬ್ಬ. ಜೋಧಪುರದ 17 ವರ್ಷದ ಕಾಲೇಜು ವಿದ್ಯಾರ್ಥಿ ಒಬ್ಬ ವಿದ್ಯಾರ್ಥಿಯೊಬ್ಬ ತನ್ನ ತಾಯಿಗೆ ರೆಫ್ರಿಜರೇಟರ್ ಉಡುಗೊರೆಯಾಗಿ ನೀಡಲು ಕಳೆದ 12 ವರ್ಷಗಳಿಂದ ತಾನು ಹಣವನ್ನು ಕೂಡಿಡುತ್ತಿದ್ದ ಪಿಗ್ಗಿ ಬ್ಯಾಂಕಿನಿಂದ ತಾನು ಕೂಡಿಟ್ಟ ಹಣವನ್ನು ಹೊರಗೆ ತೆಗಿದಿದ್ದಾನೆ ಮತ್ತು ತಾಯಿಯ ಜನ್ಮದಿನಕ್ಕೆ ಹೊಸ ಫ್ರಿಜ್ ಉಡುಗೊರೆಯಾಗಿ ನೀಡಿದ್ದಾನೆ‌. 35 ಕೆಜಿ ಚೀಲದಲ್ಲಿ ತಾನು ಕೂಡಿಟ್ಟಿದ್ದ ನಾಣ್ಯಗಳನ್ನು ತುಂಬಿಸಿಕೊಂಡು, ಯುವಕ ಶೋ ರೂಂ ಗೆ ಹೋಗಿ ಹೊಸ ಫ್ರಿಜ್ ಖರೀದಿಸಿ ಅವನು ತನ್ನ ತಾಯಿಯ ಆಸೆಯನ್ನು ಪೂರೈಸಿದ್ದಾನೆ.

ಇದಲ್ಲದೆ, ಅವನು ಶೋ ರೂಂನಲ್ಲಿ ಫ್ರಿಜ್ ಖರೀದಿಗೆ 2,000 ರೂ.ಗಳಷ್ಟು ಕಡಿಮೆಯಾದಾಗ, ಶೋ ರೂಂ ಮಾಲೀಕರು ಅವರ ಯುವಕನ ಪ್ರಯತ್ನ ಹಾಗೂ ತಾಯಿಗಾಗಿ ಆತ ನೀಡಲು ಬಯಸಿರುವ ಉಡುಗೊರೆಯ ಬಗ್ಗೆ ತಿಳಿದು ಆ ಹುಡುಗನನ್ನು ಮೆಚ್ಚಿ ಎರಡು ಸಾವಿರ ರೂಪಾಯಿ ರಿಯಾಯಿತಿಯನ್ನು ನೀಡಿದ್ದಾರೆ. ಸಹಾರನ್ ನಗರ ನಿವಾಸಿ ರಾಮ್ ಸಿಂಗ್, ತನ್ನ ತಾಯಿಯ ಜನ್ಮದಿನದಂದು ಪತ್ರಿಕೆಯಲ್ಲಿ ಫ್ರಿಜ್ ನ ಜಾಹೀರಾತನ್ನು ನೋಡಿದ್ದ. ಅದನ್ನು ನೋಡಿ ಆತ ಶೋ ರೂಂಗೆ ಕರೆ ಮಾಡಿದ್ದಾನೆ ಮತ್ತು ವಿಷಯ ತಿಳಿಸಿದ್ದಾನೆ.

ತನ್ನ ತಾಯಿ ಪಪ್ಪುದೇವಿಯ ಜನ್ಮದಿನ ಮತ್ತು ಅವರು ಫ್ರಿಜ್ ಖರೀದಿಸಲು ಬಯಸುತ್ತಿರುವ ವಿಷಯ ತಿಳಿಸಿದ ಯುವಕ, ತನ್ನ ಬಳಿ ಕೇವಲ ನಾಣ್ಯಗಳು ಮಾತ್ರ ಇದ್ದು, ಅದನ್ನೇ ಪಾವತಿಸಬಹುದೆ? ಎಂದು ಕೇಳಿದ್ದಾನೆ. ಆರಂಭದಲ್ಲಿ, ಶೋ ರೂಂ ಮಾಲೀಕ ಹರಿಕಿಶನ್ ಖತ್ರಿ ಯುವಕನ ಮಾತನ್ನು ನಂಬಲಿಲ್ಲ. ಆದರೆ ನಂತರ ಆತನ ಪ್ರಯತ್ನದ ಮನವರಿಕೆಯಾಗಿ, ಹಣವನ್ನು ನಾಣ್ಯಗಳಲ್ಲಿ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಆ ಯುವಕನ ಆಸೆಗೆ, ಪ್ರಯತ್ನಕ್ಕೆ ತಮ್ಮ ಸಹಾಯವನ್ನು ಕೂಡಾ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here