ಮಕ್ಕಳಿಗೆ ತಮ್ಮ ತಾಯಿ ಎಂದರೆ ಹೆಚ್ಚು ಪ್ರೀತಿ ಹಂಚಿಕೊಂಡಿರುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯೊಂದಿಗೆ ಬಹಳಷ್ಟು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು ತಾಯಿಯಿಲ್ಲದೆ ನಾನೂ ಇಲ್ಲ ಎಂದು ತಿಳಿದು ತನ್ನ ತಾಯಿಯೊಂದಿಗೆ ತಾನೂ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿ-ಮಗನ ಈ ಆತ್ಮಹತ್ಯೆ ಹಿಂದೆ ಕಾರಣವೂ ಇದೆ. ಮಾಧವಿ (34) ತೆಲಂಗಾಣದ ಸೂರ್ಯಪೇಟ್ ನಿವಾಸಿಯಾಗಿದ್ದು, ಈಕೆ ಕಳೆದೆರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಹೈದರಾಬಾದಿನಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಯ ನಂತರವೂ ರೋಗ ವಾಸಿಯಾಗುವುದಿಲ್ಲ ಎಂದು ಮಾಧವಿಯವರಿಗೆ ತಿಳಿದು ಬಂದಿದೆ.

ತನಗಿರುವ ರೋಗ ಗುಣವಾಗುವುದಿಲ್ಲ ಎಂಬ ಸತ್ಯವನ್ನು ಅರಿತ ಮಾಧವಿ, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯ ಆಕೆಯ ಮಗ ಹದಿನೆಂಟು ವಯಸ್ಸಿನ ಕಾರ್ತಿಕ್ ಗೆ ತಿಳಿದಿದೆ. ನೀನು ಇಲ್ಲದೆ ಇರುವ ಈ ಜಗತ್ತು ನನಗೂ ಬೇಡ ಎಂದು ಹೇಳಿದ ಮಗ, ನಾನೂ ನಿನ್ನೊಂದಿಗೆ ಬರುತ್ತೇನೆ ಎಂದು ತನ್ನ ತಾಯಿಯ ಬಳಿ ಕೇಳಿಕೊಂಡಿದ್ದಾನೆ. ನಂತರ ತಾಯಿ-ಮಗ ಇಬ್ಬರೂ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ಪುಣ್ಯಕ್ಷೇತ್ರವಾದ ಶ್ರೀ ಶೈಲಕ್ಕೆ ತೆರಳಿದ್ದಾರೆ.

ತಾಯಿ-ಮಗ ಇಬ್ಬರೂ ಸಾಕ್ಷಿ ಗಣಪತಿ ದೇವಾಲಯದ ಬಳಿ ಇರುವ ಅರಣ್ಯಕ್ಕೆ ತೆರಳಿ ಅಲ್ಲಿ ಕೀಟನಾಶಕ ಮತ್ತು ಕೆಲ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಮಾಧವಿ ಮತ್ತು ಮಗ ಕಾರ್ತಿಕ್​ ಇಬ್ಬರೂ ಮನೆಯಲ್ಲಿ ಇಲ್ಲದ ಕಾರಣ ಅವರ ಸಂಬಂಧಿಕರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಪೋಲಿಸರು ಮೊಬೈಲ್​ ಮೂಲಕ ತಾಯಿ-ಮಗನನ್ನು ಪತ್ತೆ ಹಚ್ಚಿದರಾದರೂ, ಹೋಗುವ ವೇಳೆಗೆ ಆದ್ರೆ ಮೃತದೇಹಗಳನ್ನ ಪ್ರಾಣಿಗಳು ಛಿದ್ರಗೊಳಿಸಿದ್ದವು. ತಾಯಿ-ಮಗನ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರಿಗೆ ಆಘಾತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here