ಮಾತೃ  ಹೃದಯದಲ್ಲಿ ತನ್ನ ಕಂದನಿಗಾಗಿ ಅಪಾರವಾದ ಮಮತೆ, ಪ್ರೀತಿಗಳು ಸದಾ ಇದ್ದೇ ಇರುತ್ತದೆ. ಆಕೆಯ ಪ್ರೇಮಕ್ಕೆ ಸರಿಸಾಟಿಯಾದುದು ಇನ್ನೊಂದಿಲ್ಲ. ಆಕೆ ಮನಸ್ಸಲ್ಲಿ ಪ್ರತಿಯೊಂದು ಕ್ಷಣ ಕೂಡಾ ತನ್ನ ಕಂದನ ಆಲೋಚನೆಗಳಿರುತ್ತದೆ. ಆಕೆಯ ಮನ ತನ್ನ ಕಂದನಿಗಾಗಿ ಸದಾ ಮಿಡಿಯುವುದು ಕೂಡಾ ಸಹಜ. ತಾನೆಷ್ಟೇ ಒತ್ತಡದ ಕೆಲಸದಲ್ಲಿ ಇದ್ದರೂ ತಾಯಿಯಾದವಳು ಕಂದನ ಒಂದು ಅಳುವಿನ ಧ್ವನಿ ಕೇಳಿದರೆ ಸಾಕು, ತಕ್ಷಣವೇ ಮಗುವಿನ ಬಳಿ ಓಡಿ ಬರುತ್ತಾಳೆ. ಮಗುವಿಗೆ ಸಮಯ ಸಮಯಕ್ಕೆ ಅಗತ್ಯಗಳನ್ನು ಪೂರೈಸುತ್ತಾ ತನಗಿಂತ ಮೊದಲು ತನ್ನ ಮಗುವಿನ ಬಗ್ಗೆ ಆಲೋಚನೆ ಮಾಡುವ ತಾಯಿಯ ಪ್ರೀತಿಗೆ ಜಗವೇ ತಲೆ ಬಾಗುತ್ತದೆ.

ತಾಯಿಯೊಬ್ಬಳು ಆಟದ ಮಧ್ಯೆ ಸಿಕ್ಕ ಬಿಡುವಿನ ಸಮಯದಲ್ಲಿ ತನ್ನ ಎಳೆಯ ಕಂದಮ್ಮನ ಬಳಿ ಹೋಗಿ ಎದೆ ಹಾಲುಣಿಸಿ ಅದರ ಹಸಿವು ನೀಗಿಸಿದ ಭಾವನಾತ್ಮಕ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿಯು ಮಗುವಿನ ಬಗ್ಗೆ ತೋರಿರುವ ಪ್ರೀತಿ ಹಾಗೂ ಕಾಳಜಿಗೆ ವ್ಯಾಪಕವಾಗಿ ಮೆಚ್ಚುಗೆಗಳು ಹರಿದು ಬರುತ್ತಿವೆ.
ಇದು ಮಿಜೋರಾಂ ಸ್ಟೇಟ್ ಗೇಮ್ಸ್ 2019 ರ ಸಂದರ್ಭದಲ್ಲಿ ಇಂತಹುದೊಂದು ಘಟನೆ ನಡೆದಿದೆ.
ಟುಕುಮ್ ವಾಲಿಬಾಲ್ ತಂಡದ ವಾಲಿಬಾಲ್ ಆಟಗಾರ್ತಿ ಲಾಲ್ವೆಂಟ್ಲುವಾಂಗಿ ತನ್ನ ಮಗುವಿನೊಂದಿಗೆ ಪ್ಲೇಯರ್ಸ್ ಕ್ಯಾಂಪ್‌ಗೆ ಪ್ರವೇಶ ಪಡೆದಿದ್ದರು.

ಆಕೆ ಮಗುವಿಗಾಗಿ ಮಾಡಿದ ಕಾರ್ಯ ಮತ್ತು ಆಕೆಯ ಧೈರ್ಯದ ವರ್ತನೆಗಾಗಿ ಜನರು ಆಕೆಯನ್ನು ಶ್ಲಾಘಿಸುವುದರ ಜೊತೆಗೆ ಆಕೆಯ ಫೋಟೋ ಕೂಡಾ ವೈರಲ್ ಆಗಿದೆ, ಕ್ರೀಡಾಪಟು ಮತ್ತು ಮಾತೃತ್ವ ಹೀಗೆ ಎರಡೂ ಜವಾಬ್ದಾರಿಗಳನ್ನು ಅರಿತು ನಡೆದಿರುವ ಆಕೆಯನ್ನು ಎಲ್ಲರೂ ಮೆಚ್ಚಿದ್ದಾರೆ. ಇನ್ನು ಈ ಚಿತ್ರವನ್ನು ನೋಡಿದ ರಾಜ್ಯದ ಕ್ರೀಡಾ ಸಚಿವರು ಆಕೆಗೆ ರೂ .10,000 / – ಮೊತ್ತವನ್ನು ನೀಡಲು ನಿರ್ಧರಿಸಿದ್ದಾರೆ. ಇದೊಂದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದೇ ಹೇಳಬಹುದಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here