ತಾಯಿಯ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ಮಿಗಿಲಾದುದು ಈ ಜಗತ್ತಿನಲ್ಲೇ ಇಲ್ಲ. ಮಾತೃ ವಾತ್ಸಲ್ಯವನ್ನು ದೇವ ದೇವತೆಗಳು ಕೂಡಾ ಗೌರವಿಸಿ ಆರಾಧಿಸಿರುವ ಅದೆಷ್ಟೋ ಉದಾಹರಣೆ ಗಳಿವೆ. ಈಗ ಒಂದು ಘಟನೆಯಲ್ಲಿ ಅದನ್ನು ತಾಯಿಯ ಪ್ರೀತಿಯೆಂದರೂ ಸರಿಯೇ, ಆಕೆಯ ಪ್ರೀತಿಯಿಂದ ಆದ ಚಮತ್ಕಾರ ಎಂದರೂ ಸರಿಯೇ ಪವಾಡ ಸದೃಶ ಅಪರೂಪದ ಘಟನೆಯೊಂದು ನಡೆದಿದೆ ನಮ್ಮ ನೆರೆಯ ರಾಜ್ಯ ತೆಲಂಗಾಣದಲ್ಲಿ. ಹದಿನೆಂಟು ವಯಸ್ಸಿನ ಗಂದಮ್ ಕಿರಣ್ ಎಂಬ ಯುವಕನು ಜಾಂಡೀಸ್, ಡೆಂಗ್ಯೂ ಹಾಗೂ ಹೆಪಟೈಟಿಸ್ ಬಿ ಪಾಸಿಟಿವ್ ಕೂಡಾ ಪತ್ತೆಯಾಗಿ ಆತನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು ಕುಟುಂಬದವರು.

ಆಸ್ಪತ್ರೆಗೆ ದಾಖಲಾದರೂ ಆರೋಗ್ಯ ಸ್ಥಿತಿ ಸುಧಾರಿಸಿರಲಿಲ್ಲ. ಆಸ್ಪತ್ರೆ ಹಾಗೂ ವೈದ್ಯರ ಯುವಕನ ಮೆದುಳು ನಿಷ್ಕ್ರಿಯವಾಗಿದೆ ಇನ್ನು ಬದುಕುಳಿಯುವುದು ಅಸಾಧ್ಯ ಎಂದು ಹೇಳಿದ್ದಾರೆ. ನಂತರ ಮಗನನ್ನು ಆಸ್ಪತ್ರೆಯಿಂದ ಹಳ್ಳಿಗೆ ತಂದ ಆಕೆ ಕೃತಕ ಉಸಿರಾಟವನ್ನು ತೆಗೆಸಲು ಒಪ್ಪಿಲ್ಲ. ವೈದ್ಯರೆಲ್ಲಾ ಕೈ ಚೆಲ್ಲಿಯಾಗಿತ್ತು. ಇನ್ನು ಆತನ ಲೈಫ್ ಸಪೋರ್ಟ್ ತೆಗೆದು ಆರಾಮವಾಗಿ ಸಾಯಲು ಅವಕಾಶ ಮಾಡುವಂತೆ ಹೇಳಿದ್ದಾರೆ. ಆದರೆ ಒಪ್ಪದ ತಾಯಿ ಸಿದ್ಧಮ್ಮ ತನ್ನ ಮಗನ ಪ್ರಾಣ ಉಳಿಯುತ್ತದೆ ಎಂದು ವಿಶ್ವಾಸ ಹೊಂದಿದ್ದರು. ಆತನ ಪ್ರಾಣ ಉಳಿಯಲೆಂದು ಕಣ್ಣೀರು ಸುರಿಸಿ ದೇವರಲ್ಲಿ ಬೇಡಿಕೊಂಡಳು.

ಕೊನೆಗೂ ಆ ತಾಯಿಯ ಆಸೆ ನಿರಾಸೆಯಾಗಲಿಲ್ಲ. ಕಳೆದ ಜುಲೈ 3 ರ ರಾತ್ರಿ ಆ ತಾಯಿಯ ಕಣ್ಣೀರಿಗೆ ಉತ್ತರ ಸಿಕ್ಕಿದೆ. ರಾತ್ರಿ ಕಿರಣ್ ಕಣ್ಣಿಂದ ಬಂದ ಕಣ್ಣೀರು ಆತನ ಕೆನ್ನೆ ಮೇಲೆ ಹರಿದು ಬರುವುದನ್ನು ನೋಡಿದ್ದಾರೆ ಸಿದ್ಧಮ್ಮ. ಕೂಡಲೇ ಹತ್ತಿರದಲ್ಲಿದ್ದ ರಾಜಬಾಬು ರೆಡ್ಡಿ ಎಂಬ ಸರ್ಟಿಫೈಢ್ ಮೆಡಿಕಲ್ ಪ್ರಾಕ್ಟೀಸ್ ಮಾಡುವ ವ್ಯಕ್ತಿಗೆ ಆ ತಾಯಿ ಕರೆ ಮಾಡಿದಾಗ ಆತ ಬಂದು ನೋಡಿದ್ದಾರೆ. ನಂತರ ಅವರು ವೈದ್ಯರಿಗೆ ಕರೆ ಮಾಡಿದಾಗ, ವೈದ್ಯರು ನಾಲ್ಕು ಇಂಜೆಕ್ಷನ್ ತಿಳಿಸಿದ್ದಾರೆ. ಅದರಂತೆ ಕೊಟ್ಟ ಚಿಕಿತ್ಸೆಯ ನಂತರ ದಿನೇ ದಿನೇ ಕಿರಣ್ ಆರೋಗ್ಯ ಸುಧಾರಿಸುತ್ತಾ ಬಂದಿದೆ. ಈ ಸುದ್ದಿ ಅಲ್ಲಿ ಬಹು ಬೇಗ ಹರಡಿದ್ದು, ತಾಯಿಯ ಪ್ರೀತಿಯ ಪ್ರಾರ್ಥನೆ ಕಿರಣ್ ನನ್ನು ಸಾವಿನಂಚಿನಿಂದ ಕರೆ ತಂದಿದೆ ಎನ್ನುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here