ಇಡೀ ದೇಶವನ್ನೇ ಬೆಚ್ಚಿ ಬೀಳಿಸದ ಘಟನೆ ಹೈದರಾಬಾದಿನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ‌. ಈ ಪ್ರಕರಣದ ನಾಲ್ಕು ಜನ ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು, ಆರೋಪಿಯ ತಾಯಿ ಆಕೆಯನ್ನು ಹೇಗೆ ಕೊಂದರೋ, ನನ್ನ ಮಗನನ್ನು ಕೂಡಾ ಕೊಂದು ಹಾಕಿ ಎಂದು ಹೇಳಿದ್ದಾರೆ. ಆರೋಪಿಗಳ ಕುಟುಂಬಕ್ಕೆ ತೀವ್ರವಾದ ಅವಮಾನವಾಗಿದ್ದು, ಮಗನ ಕೃತ್ಯದ ಬಗ್ಗೆ ಹೆತ್ತ ತಾಯಿಯೇ ಅಸಹ್ಯ ಪಟ್ಟಿದ್ದು, ಮಗ ಇಂತಹ ಕೃತ್ಯ ಮಾಡಿದ್ದರೆ ಅವನನ್ನು ಕೊಂದು ಹಾಕಿ ಎಂದು ಆಕೆ ಹೇಳಿದ್ದಾರೆ. ಕೊಲೆ ಆರೋಪಿಗಳಲ್ಲಿ ಪ್ರಮುಖನಾದ ಮಹಮದ್ ತಾಯಿ ಮೊಲಂಬಿ ಮಾತನಾಡುತ್ತಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಲಾರಿ ಚಾಲಕನಾದ ಮಗ ಆ ದಿನ ರಾತ್ರಿ ಮನೆಗೆ ಬಂದು,‌ ತಾನೊಂದು ಅಪಘಾತ ಮಾಡಿದ್ದು ಸ್ಕೂಟರ್ ನಲ್ಲಿ ಬರುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆಂದು ಹೇಳಿದ್ದ. ನಂತರ ತಡರಾತ್ರಿ ಪೋಲಿಸರು ಬಂದು ಅರೆಸ್ಟ್ ಮಾಡಿದರು. ಆದರೆ ಇಂತಹ ಕೃತ್ಯ ಮಾಡಿದ್ದಾನೆಂದು ತಿಳಿದಿರಲಿಲ್ಲ. ಅದು ನಿಜವೇ ಆದರೆ ಅವನನ್ನು ಕೊಂದು ಬಿಡಿ ಎಂದಿದ್ದಾರೆ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಚೆನ್ನಕೇಶವುಲು ತಾಯಿ ಶ್ಯಾಮಲಾ ಮಾತನಾಡುತ್ತಾ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ ಹೆಣ್ಣು ಮಕ್ಕಳ ಬಗ್ಗೆ ಹೀಗೆ ವರ್ತಿಸುತ್ತಾನೆಂದು ಊಹೆ ಮಾಡಿರಲಿಲ್ಲ. ನನಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ.ಹೆಣ್ಣು ಹೆತ್ತವರ ನೋವು ಏನೆಂದು ನನಗೂ ಗೊತ್ತಿದೆ.

ಆ ವೈದ್ಯೆಯ ಮನೆಯವರು ಎಷ್ಟು ನೋವು ಪಡುತ್ತಾರೆಂದು ನನಗೆ ಅರಿವಿದೆ. ಆಕೆಯನ್ನು ಸುಟ್ಟಂತೆ ನನ್ನ ಮಗನನ್ನು ಕೂಡಾ ಸುಟ್ಟು ಬಿಡಿ ಎನ್ನುತ್ತಾ ಪ್ರಿಯಾಂಕ ರೆಡ್ಡಿಯವರು ಕುಟುಂಬಕ್ಕೆ ಬಹಿರಂಗವಾಗಿ ಕ್ಷಮಾಪಣೆ ಕೇಳಿದ್ದಾರೆ. ಅಲ್ಲದೆ ಮಗನಿಗೆ ಕಿಡ್ನಿ ಸಮಸ್ಯೆಯಿದ್ದು ಆರು ತಿಂಗಳಿಗೊಮ್ಮೆ ಚಿಕಿತ್ಸೆ ಕೊಡಿಸಬೇಕಿತ್ತು‌. ಕೆಲವೇ ತಿಂಗಳುಗಳ ಹಿಂದೆ ಅವನು ಇಷ್ಟ ಪಟ್ಟ ಹುಡುಗಿಯ ಜೊತೆ ಮದುವೆ ಕೂಡಾ ಮಾಡಿದ್ದೆವು. ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೆವು. ಆದರೆ ಅಂತಹವನೇ ಇಂತಹ ಕೃತ್ಯ ಮಾಡಿರುವುದು ನಂಬಲಾಗುತ್ತಿಲ್ಲ. ಆದರೆ ನಾನು ಅವನನ್ನು ಸಮರ್ಥನೆ ಮಾಡುವುದಿಲ್ಲ.

ಹಾಗೆ ಮಾಡಿದರೆ ಜೀವನಪರ್ಯಂತ ತಪ್ಪು ಮಾಡಿದ ಭಾವನೆ ಕಾಡುತ್ತದೆ ಎಂದಿದ್ದಾರೆ. ಚೆನ್ನಕೇಶವುಲು ತಂದೆ ಅವಮಾನ ತಾಳಲಾರದೆ ಊರು ಬಿಟ್ಟು ಹೋಗಿದ್ದು, ಇಂತ ಮಗನನ್ನು ಹೆತ್ತಿದ್ದಕ್ಕೆ ಆ ತಾಯಿ ಪರಿತಪಿಸುವಂತಾಗಿದೆ. ಸದ್ಯ ನಾಲ್ಕು ಜನ ಆರೋಪಿಗಳು ಕೂಡಾ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here