ಬಾಯಿ ಹುಣ್ಣು ನಿವಾರಣೆಗೆ ಸಿಂಪಲ್‌ ಮನೆಮದ್ದು ನಮ್ಮ ದೇಹದಲ್ಲಿ ಹೀಟ್‌ ಹೆಚ್ಚಾದರೆ ಬಾಯಲ್ಲಿ ಅಲ್ಸರ್‌ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅದು ಸಣ್ಣದಿದ್ದು ಅಷ್ಟೊಂದು ಇರಿಟೇಟ್‌ ಆಗುವುದಿಲ್ಲ, ಆದರೆ ಇದು ದೊಡ್ಡದಾದರೆ ಅಥವಾ ಹೆಚ್ಚಾದರೆ ನೋವು ವಿಪರೀತವಾಗುತ್ತದೆ. ಅಲ್ಲದೇ ಏನು ತಿನ್ನಲು ಸಹ ಸಾಧ್ಯವಿಲ್ಲ. ನಿಮಗೂ ಈ ಸಮಸ್ಯೆ ಕಾಣಿಸಿಕೊಂಡರೆ ಈ ಸಿಂಪಲ್‌ ವಿಧಾನದ ಮೂಲಕ ಅದನ್ನು ನಿವಾರಣೆ ಮಾಡಿಕೊಳ್ಳಿ.

ತೆಂಗಿನ ಹಾಲು : ಇದು ಉತ್ತಮ ನಿವಾರಕವಾಗಿದೆ. ತೆಂಗಿನ ಹಾಲಿಗೆ ಸ್ವಲ್ಪ ಜೇನು ಸೇರಿಸಿ, ಎಲ್ಲಿ ಅಲ್ಸರ್‌ ಉಂಟಾಗಿದೆ ಅಲ್ಲಿಗೆ ಹಚ್ಚಿ ಮಸಾಜ್‌ ಮಾಡಿ. ಇದನ್ನು ದಿನದಲ್ಲಿ ಮೂರರಿಂದ – ನಾಲ್ಕು ಬಾರಿ ಮಾಡಿ. ಅಥವಾ ತೆಂಗಿನ ನೀರನ್ನು ಬಳಸಿ ಬಾಯಿಯನ್ನು ಶುಚಿಗೊಳಿಸಿ. ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್‌ ಮಾಡಿ.

ಕೊತ್ತಂಬರಿ ಬೀಜ : ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದನ್ನು ಸೋಸಿ ತಣ್ಣಗಾಗಲು ಬಿಡಿ. ಇದನ್ನು ಬಾಯಿಗೆ ಹಾಕಿ ಕ್ಲೀನ್‌ ಮಾಡಿ. ಹೀಗೆ ಮೂರು ಬಾರಿ ಮಾಡಿದರೆ ಬೇಗನೆ ಗುಣವಾಗುತ್ತದೆ.

ಬೇಕಿಂಗ್‌ ಸೋಡಾ : ಬೇಕಿಂಗ್‌ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಪೇಸ್ಟ್ ಮಾಡಿ, ನಂತರ ಇದನ್ನು ಎಫೆಕ್ಟ್‌ ಆದ ಜಾಗಕ್ಕೆ ಹಚ್ಚಿ. ಇದನ್ನು ಹಲವಾರು ಬಾರಿ ಮಾಡಿ.

ಜೇನು : ಒಂದು ಹತ್ತಿ ಉಂಡೆಯನ್ನು ಜೇನಿನಲ್ಲಿ ಅದ್ದಿ ಅಲ್ಸರ್‌ ಆದ ಜಾಗಕ್ಕೆ ಹಚ್ಚುವುದರಿಂದ ಬೇಗನೆ ಗುಣಮುಖವಾಗುತ್ತದೆ.

ಅಲೋವಿರಾ : ಅಲೋವಿರಾ ಜೆಲ್‌ ಅಥವಾ ಜ್ಯೂಸ್‌ನ್ನು ಅಫೆಕ್ಟೆಡ್‌ ಏರಿಯಾಕ್ಕೆ ಹಚ್ಚುವುದರಿಂದ ನೋವು ಬೇಗನೆ ಕಡಿಮೆಯಾಗಿ ಅಲ್ಸರ್‌ ನಿವಾರಣೆಯಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here