ಮಾನ್ಯ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಇಂದು ಒಂದು ಭರವಸೆಯನ್ನು ನೀಡಿದ್ದಾರೆ. ಸಿಎಂ ಅವರು ಹೊಸಕೋಟೆಯಲ್ಲಿ ಮಾತನಾಡುತ್ತಾ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ ಎಂದು ಎಂಟಿಬಿ ಅವರಿಗೆ ಮಾತು ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿ ಅವರು ಹೊಸಕೋಟೆಯಲ್ಲಿ ಇಂದು ಏತ ನೀರಾವರಿ ಹಾಗೂ ಇನ್ನೂ ಹಲವು ಯೋಜನೆಗಳಿಗೆ ಚಾಲನೆ ನೀಡಿ ಅನಂತರ ಮಾತನಾಡುತ್ತಾ ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ ಆದ್ಯತೆ ಮೇರೆಗೆ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಮೈತ್ರಿ ಸರ್ಕಾರವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಕೊಟ್ಟಿದ್ದರೆ ಎಂಟಿಬಿ ಅವರಿಗೆ ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ ಎಂದಿದ್ದಾರೆ ಮಾನ್ಯ ಮುಖ್ಯ ಮಂತ್ರಿಗಳು.

ಎಂಟಿಬಿ ಅವರು ಯಾವುದೇ ಪಕ್ಷದಿಂದಲೇ ಆಗಲಿ ಅಥವಾ ಪಕ್ಷೇತರ ಅಭ್ಯರ್ಥಿಯಾದರೂ ಕೂಡಾ ಅವರಂತಹ ಶಾಸಕರು ಆಯ್ಕೆಯಾಗಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಎಂಟಿಬಿ ಪ್ರಾಮಾಣಿಕ ವ್ಯಕ್ತಿ, ಅವರು ಶಾಸಕನಾಗಬೇಕು. ಅಲ್ಲದೆ ಯಡಿಯೂರಪ್ಪ ಮಾತನಾಡಿದರೆ ಆ ಮಾತಿನಿಂದ ಹಿಂದೆ ಸರಿಯುವ ವ್ಯಕ್ತಿ ಅಲ್ಲ. ಎಂಟಿಬಿ ಅವರು ಇನ್ನು ಹತ್ತು ಕೆಲಸಗಳನ್ನು ಹೇಳಿ, ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಮುಖ್ಯ ಮಂತ್ರಿಗಳು ಮಾತು ನೀಡಿದ್ದಾರೆ. ಇದೆಲ್ಲಾ ಆದ ನಂತರ ನೆರೆದಿದ್ದ ಜನರನ್ನು ಸಿಎಂ ಅವರು ಮತ್ತೇನು ಬೇಕಣ್ಣ ಎಂದು ಕೇಳಿದಾಗ ಅವರ ಮಾತು ಕೇಳಿದ ಸಭಿಕರು ಕೇಕೆ ಹಾಕಿ ಸಂತಸಪಟ್ಟಿದ್ದಾರೆ.

ಶಿಕಾರಿಪುರದಂತೆ ಹೊಸಕೋಟೆ ಕ್ಷೇತ್ರ ಮಾದರಿಯಾಗಬೇಕೆಂದ ಸಿಎಂ ಅವರು ಅದಕ್ಕಾಗಿ ನಾನು ಯಾವುದೇ ಕೆಲಸ ಮಾಡಿಕೊಡಲು ಸಿದ್ಧ ಎಂದು ಹೇಳುತ್ತಾ ಹೊಸಕೋಟೆ ನಗರಕ್ಕೆ ಮೆಟ್ರೋ ರೈಲಿನ ವಿಸ್ತರಣೆ ಕುರಿತಾಗಿ ಮಾತನಾಡಿದ ಸಿಎಂ ಅವರು, ಈ ವಿಷಯವಾಗಿ, ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುವುದಾಗಿ ತಾನು ಮತ್ತೆ ಹೊಸಕೋಟೆಗೆ ಬಂದು ಮೆಟ್ರೋ ಯೋಜನೆಯ ವಿಸ್ತರಣೆಗೆ ಶಂಕುಸ್ಥಾಪನೆ ಮಾಡುವುದಾಗಿಯೂ ಸಿಎಂ ಯಡಿಯೂರಪ್ಪ ಭರವಸೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here