ಮೈತ್ರಿ ಸರ್ಕಾರದ ಪತನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದ್ದವರಲ್ಲಿ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಕೂಡಾ ಒಬ್ಬರು. ಅವರು ಇಂದು ಸಿಎಂ ಬಿಎಸ್​ ಯಡಿಯೂರಪ್ಪನವರನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ ನೆರೆ ಪರಿಹಾರಕ್ಕಾಗಿ ತಮ್ಮ ಕಡೆಯಿಂದ ಚೆಕ್​ ನೀಡಿದರು. ಎಂಟಿಬಿ ಅವರು ಬಂದು ಬಿಎಸ್​ವೈ ಅವರನ್ನು ಭೇಟಿ ಮಾಡಿದ್ದು, ಚೆಕ್ ನೀಡಿದ್ದಕ್ಕಿಂತ ಈಗ ಎಲ್ಲರ ಗಮನ ಸೆಳೆದಿರುವುದು ಅವರು ಪ್ರಯಾಣಿಸಿದ್ದ ಕಾರು. ಮುಂಬೈನಿಂದ ಬಂದ ಮೇಲೆ ಎಂಟಿಬಿ ಅವರು ಇದೇ ಮೊದಲ ಬಾರಿ ಬಿಎಸ್​ವೈ ಭೇಟಿ ಮಾಡಿದ್ದಾರೆ.

ಎಂಟಿಬಿ ನಾಗರಾಜ್​, ಒಂದು ವಾರದ ಹಿಂದೆಯಷ್ಟೇ 12 ಕೋಟಿ ಬೆಲೆಬಾಳುವ ಕಾರಿನ್ನು ಖರೀದಿಸಿದ್ದು, ಅವರು ಅದೇ ಕಾರಿನಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ಆಗಮಿಸಿದ್ದರು. ಈ ಕುರಿತು ಅವರು ಪ್ರತಿಕ್ರಿಯೆ ನೋಡುತ್ತಾ, “ಈ ಕಾರು ಖರೀದಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಇದೀಗ ಆ ಆಸೆ ಕೈಗೂಡಿದೆ” ಎಂದು ಅವರು ಹೇಳಿದ್ದಾರೆ. ಎಂಟಿಬಿ ನಾಗರಾಜ್​ ಅವರ ಈ ಕಾರಿನ ಕುರಿತಾಗಿ ಕಾಂಗ್ರೆಸ್​ ನಾಯಕ ನಿವೇದಿತಾ ಆಳ್ವಾ ಟೀಕೆ ಮಾಡಿದ್ದಾರೆ.‌

ನಿವೇದಿತಾ ಆಳ್ವ ಅವರು ಎಂಟಿಬಿ ನಾಗರಾಜ್​ ಅವರನ್ನು ಟೀಕೆ ಮಾಡುತ್ತಾ, ಎಂಟಿಬಿ ಅಬರು ಈಗಾಗಲೇ ಲಕ್ಷಾಧೀಶ್ವರರು. ಆದರೆ ರಜಾದಿನ ಕಳೆಯಲು ಮುಂಬೈಗೆ ಅವರು ವೈಯಕ್ತಿಕ ವಿಮಾನದಲ್ಲಿ ತೆರಳಿದ್ದರು. ಅನಂತರ ಅನರ್ಹಗೊಂಡಿದ್ದ ಶಾಸಕರು ತಮ್ಮ ಹೊಸ ರೋಲ್ಸ್ ರಾಯ್ಸ್ ಕಾರಿನೊಂದಿಗೆ ಫೋಸ್​ ನೀಡಿದ್ದಾರೆಂದು ಅವರು ಟ್ವೀಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here