ಕಾಂಗ್ರೆಸ್ ನ ಮುಖ್ಯವಾದ ನಾಯಕರು ಎಂಟಿಬಿ ನಾಗರಾಜ್ ಅವರ ಮನವೊಲಿಕೆಗೆ ಮಾಡಿದ ಎಲ್ಲಾ ಪ್ರಯತ್ನಗಳ ಹೊರತಾಗುಯೂ, ಅವರ ಮನವೊಲಿಕೆಗಳಿಗೆ ಮನ ಸೋಲದೆ, ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಯಾರೊಬ್ಬರ ನಿರೀಕ್ಷಿಸದ ಒಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಅವರು ಇದ್ದಕ್ಕಿದ್ದಂತೆ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಅವರು ಮುಂಬೈಗೆ ಕಡೆ ತೆರಳಿದ‌ ವಿಚಾರ ತಿಳಿಯುತ್ತಿದ್ದಂತೆ ಅದು ಮಾನ್ಯ ಸಿಎಂ ಅವರಿಗೆ ಅದೊಂದು ಹೊಸ ಸಮಸ್ಯೆ ಎನಿಸಿದೆ. ಸದ್ಯಕ್ಕೆ ವಿಶ್ವಾಸ ಮತಯಾಚನೆಯ ನಿರೀಕ್ಷೆಯಲ್ಲಿದ್ದ ಸಿಎಂ ಅವರಿಗೆ ಮತ್ತೊಮ್ಮೆ ಟೆನ್ಶನ್ ಕ್ರಿಯೇಟ್ ಮಾಡಿದ್ದಾರೆ ಎಂಟಿಬಿ ನಾಗರಾಜ್ ಅವರು. ಇದೇ ದಿನ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ತನಗಿಂದು ಸ್ವಲ್ಪ ಪರ್ಸನಲ್ ಕೆಲಸವಿದ್ದು, ದೇವಸ್ಥಾನಕ್ಕೆ ಹೋಗಬೇಕಾಗಿದೆ ಎಂದು ಹೇಳಿದ್ದರು.

ಅದಕ್ಕಿಂತ ವಿಚಿತ್ರ ಏನೆಂದರೆ ಅವರು ಮಾದ್ಯಮಗಳ ಮುಂದೆ ನಾನು ಯಾವುದೇ ಕಾರಣದಿಂದಲೂ ಮುಂಬೈಗೆ ಹೋಗುವುದಿಲ್ಲವೆಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಅನಿರೀಕ್ಷಿತ ಬೆಳವಣಿಗೆ ಎಂಬಂತೆ ದಿಢೀರ್ ಆಗಿ ಎಂಟಿಬಿ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿರುವುದು ಈಗ ತೀವ್ರ ಕುತೂಹಲ ಕೆರಳಿಸಿದೆ. ನೂರು ಅನುಮಾನಗಳನ್ನು ಹುಟ್ಟು ಹಾಕಿವೆ. ಅವರ ಮನವೊಲಿಸಲು ಶನಿವಾರ ನಡೆದ ದೊಡ್ಡ ಪ್ರಹಸನದಲ್ಲಿ ಅವರು ರಾಜೀನಾಮೆ ಹಿಂಪಡೆಯುತ್ತೇನೆ, ಕಾಂಗ್ರೆಸ್ ನಲ್ಲಿ ಮುಂದುವರೆಯುತ್ತೇನೆ ಎಂದೆಲ್ಲಾ ಹೇಳಿಕೆಗಳನ್ನು ನೀಡಿದ್ದರು. ನಿನ್ನೆ ರಾತ್ರಿ ಕೂಡಾ ಸಿಎಂ ಅವರು ಎಂಟಿಬಿ ನಾಗರಾಜ್ ಅವರಿಗೆ ಕರೆ ಮಾಡಿದ್ದರು, ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ಅಲ್ಲಿಗೆ ಎಂಟಿಬಿ ಅವರು ಸರ್ಕಾರಕ್ಕೆ ಮತ್ತೆ ಮರಳುತ್ತಾರೆ ಎಂದು ಸಿಎಂ ಅವರ ಆದಿಯಾಗಿ ಎಲ್ಲರೂ ನಂಬಿದ್ದರು. ಆದರೆ ಈಗ ಅವರು ಇದ್ದಕ್ಕಿದ್ದಂತೆ ಮುಂಬೈಗೆ ಹಾರಿರುವುದು ರಾಜಕೀಯ ವಲಯದಲ್ಲಿ ಆತಂಕ ಹಾಗೂ ಅನುಮಾನಗಳನ್ನು ಹುಟ್ಟು ಹಾಕಿದೆ. ಸತೀಶ್ ರೆಡ್ಡಿ ಅವರ ಕಾರಿನಲ್ಲಿ ಹೆಚ್‍ಎಎಲ್‍ಗೆ ಹೋಗಿ ಆರ್.ಆಶೋಕ್ ಅವರೊಂದಿಗೆ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಒಟ್ಟಿನಲ್ಲಿ ಅವರ ನಡೆ ಒಂದು ಸಂಚಲನಕ್ಕೆ ಕಾರಣವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here