ಸ್ಯಾಂಡಲ್ ವುಡ್ ನಲ್ಲಿ 2017 ರಲ್ಲಿ ಬಿಡುಗಡೆ ಹೊಂದಿ ಘನ ವಿಜಯಗಳಿಸಿದ ಆಕ್ಷನ್ ಚಿತ್ರ ಮಫ್ತಿ. ನಿರ್ದೇಶಕ ನರ್ತನ್ ತಮ್ಮ ಪ್ರಥಮ ಚಿತ್ರದಲ್ಲಿಯೇ ಭರ್ಜರಿ ಜಯಭೇರಿ ಬಾರಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶ್ರೀ ಮುರುಳಿ ಹಾಗೂ ಶಾನ್ವಿ ಶ್ರೀ ವಾತ್ಸವ ನಟಿಸಿದ ಈ ಚಿತ್ರ ಬಾಕ್ಸಾಫೀಸಿನಲ್ಲೂ ದಾಖಲೆ ಕಲೆಕ್ಷನ್ ಮಾಡಿದೆ.

ಶಿವರಾಜ್ ಕುಮಾರ್ ಭೂಗತ ದೊರೆಯ ಪಾತ್ರದಲ್ಲಿ ಚಿತ್ರ ರಸಿಕರನ್ನು ರಂಜಿಸಿದ ಚಿತ್ರ. ಭೈರತಿ ರಣಗಲ್ ಎಂಬ ಪಾತ್ರ ನಿರ್ವಹಿಸಿದ್ದ ಡಾ.ಶಿವಣ್ಣ ಈ ಚಿತ್ರದ ಮೂಲಕ ಹಿಸ ಟ್ರೆಂಡ್ ಸೃಷ್ಟಿಸಿದ್ದು ಈಗ ಇತಿಹಾಸ.ಕನ್ನಡದಲ್ಲಿ ಅತಿ ಹೆಚ್ಚು ಮಲ್ಟಿಪ್ಲೆಕ್ಸ್ ಷೋಗಳನ್ನ ಕಂಡು ದಾಖಲೆ ಮಾಡಿದ್ದ ಮಫ್ತಿ ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.

ಅಷ್ಟೇ ಅಲ್ಲದೆ ಮಫ್ತಿ ಹಿಂದಿ ಡಬ್ಬಿಂಗ್ ರೈಟ್ಸ್ ಸಹ ದಾಖಲೆಗೆ ಮಾರಾಟವಾಗಿತ್ತು.UTV ಮೂವಿಸ್ ನಲ್ಲಿ ಹಿಂದಿ ಚಿತ್ರ ಪ್ರದರ್ಶನ ಕಂಡ ನಂತರ ಸಿನಿಕೋರ್ನ್ ಸಂಸ್ಥೆ ಯೂಟ್ಯೂಬ್‌ನಲ್ಲಿ ಮಫ್ತಿ ಹಿಂದಿ ವರ್ಸನ್ ಅಪ್ ಲೋಡ್ ಮಾಡಿತ್ತು.  ಸಿನಿಕೋರ್ನ್ ಎಂಬ ಯೂಟ್ಯೂಬ್ ಚಾನೆಲ್ ಮಫ್ತಿ ಚಿತ್ರವನ್ನು ಹಿಂದಿಗೆ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆಮಾಡಿದೆ.

ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸುಮಾರು 8ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಈ ಚಿತ್ರ ಪಡೆದಿದ್ದು , ತನ್ನ ಗತ್ತನ್ನು ಮತ್ತೊಮ್ಮೆ ಸಾರಿದೆ. ಚಿತ್ರ ವೀಕ್ಷಿಸಿದ ಹಲವರು ಇದರಲ್ಲಿನ ಆಕ್ಷನ್ ದೃಶ್ಯಗಳಿಗೆ ಫಿದಾ ಆಗಿದ್ದು, ಚಿತ್ರ ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ.

ಒಟ್ಟಾರೆ ಮಫ್ತಿ ಕನ್ನಡದಲ್ಲಿ ಮಾತ್ರ ಹೆಸರು ಮಾಡಿದಲ್ಲದೆ, ಈಗ ಹಿಂದಿ ಭಾಷೆಯಲ್ಲಿ ಬಿಡುಗಡೆ ಹೊಂದಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.ಕನ್ನಡ ಚಿತ್ರವೊಂದು ಒಂದೇ ದಿನಕ್ಕೆ ಯೂಟ್ಯೂಬ್‌ನಲ್ಲಿ ಇಷ್ಟೊಂದು ವೀವ್ಸ್ ಪಡೆದಿರುವುದು ಹೊಸ ದಾಖಲೆ .ಕನ್ನಡ ಚಿತ್ರಗಳ ಹವಾ ಈಗ ಎಲ್ಲಾ ಕಡೆ ಜೋರಾಗೇ ಇದೆ ಎನ್ನಬಹುದು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here