ಡಿಸೆಂಬರ್ ಒಂದರಂದು ತೆರೆ ಕಂಡು ಅಭಿಮಾನಿಗಳಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ ಸಿನಿಮಾ “ಮಫ್ತಿ”.ಅದರಲ್ಲೂ ” ಭೈರತಿ ರಣಗಲ್” ಎಂಬ ಶಿವರಾಜ್ ಕುಮಾರ್ ಅವರ ಕ್ಯಾರೆಕ್ಟರ್ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ.ಪರಭಾಷಿಕರೂ ಶಿವಣ್ಣನ ಈ ಗೆಟಪ್ ಗೆ ಮಾರುಹೋಗಿದ್ದರು.


ಮಫ್ತಿ ಚಿತ್ರ ಇತ್ತೀಚೆಗಷ್ಟೇ ಭರ್ಜರಿ 25 ದಿನಗಳನ್ನು ಪೂರೈಸಿ ಯಶಸ್ವಿ 50 ನೇ ದಿನದತ್ತ ಸಾಗುತ್ತಿದೆ.ಮಫ್ತಿ ಯ ಭೈರತಿ ರಣಗಲ್ ಪಾತ್ರ ಸೃಷ್ಟಿಸಿರುವ ಕ್ರೇಜ್ ಎಂತದ್ದು ಎಂದು ಈಗಾಗಲೇ ಕನ್ನಡ ಸಿನಿರಸಿಕರಿಗೆ ಗೊತ್ತಾಗಿದೆ.ಭೈರತಿ ರಣಗಲ್ ಪಾತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಇತ್ತೀಚೆಗೆ ಮಾರುಹೋಗಿದ್ದರು ಈ ಸಂತೋಷದಲ್ಲೇ ಶಿವರಾಜ್ ಕುಮಾರ್ ಅಭಿಮಾನಿಗಳ ಇರುವಾಗಲೇ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸ್ಯಾಂಡಲ್ ವುಡ್ ನಿಂದ ಹೊರಬಿದ್ದಿದೆ.

ಭೈರತಿ ರಣಗಲ್ ಎಂಬ ಹೆಸರಿನಿಂದಲೇ ಸಿನಿಮ ಬರುವುದು ಪಕ್ಕಾ ಆಗಿದ್ದು ಇದನ್ನು ಭೈರತಿ ರಣಗಲ್ ಪಾತ್ರ ಸೃಷ್ಟಿಸಿದ ನರ್ತನ್ ಎಂ ಅವರೇ ನಿರ್ದೇಶನ ಮಾಡಲಿದ್ದಾರೆ.ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಏನೆಂದ್ರೆ ಈ ಸಿನಿಮಾವನ್ನು ಶಿವರಾಜ್ ಕುಮಾರ್ ತಮ್ಮ ಹೋಂ ಬ್ಯಾನರ್ ನಲ್ಲೇ ನಿರ್ಮಿಸಲಿದ್ದು ಈಗಾಗಲೇ ಭೈರತಿ ರಣಗಲ್ ಎಂಬ ಟೈಟಲ್ ಕೂಡ ರಿಜಿಸ್ಟರ್ ಮಾಡಿಸಲಾಗಿದೆ ಎಂಬ ಬಿಸಿ ಬಿಸಿ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ.ಆಗೊಂದು ಈ ಸುದ್ದಿ ನಿಜವೇ ಆಗಿದ್ದರೆ ಶಿವಣ್ಣನ ಅಭಿಮಾನಿಗಳಿಗೆ ಈ ಸಿನಿಮಾ ಭಾರೀ ನಿರೀಕ್ಷಿತ ಸಿನಿಮಾ ಆಗುವುದರಲ್ಲಿ ಯಾವುದೇ ಡೌಟ್ ಇಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here