ಕನ್ನಡ ಚಿತ್ರ ರಂಗದಲ್ಲೇ ಹೊಸ ಅಲೆಯನ್ನು ಎಬ್ಬಿಸಿದ ಚಿತ್ರ ಮಪ್ತಿ ಡಾ.ಶಿವಣ್ಣ ಹಾಗು ಶ್ರೀ ಮುರುಳಿ ಅಭಿನಯದ ಮಪ್ತಿ ಚಿತ್ರವು ಕರ್ನಾಟಕಲ್ಲಿ ಅಲ್ಲದೇ ಪಕ್ಕದ ರಾಜ್ಯದ ಸಿನಿ ರಸಿಕರಲ್ಲಿ ಭಾರಿ ಸದ್ದು ಮಾಡಿತ್ತು.ಈಗ ಈ ಚಿತ್ರಕ್ಕೆ ಬಾರಿ ಬೇಡಿಕೆ ಬಂದಿದ್ದು ಅಲ್ಲಿ ರಿಮೇಕ್ ಮಾಡಲು ಭಾರಿ ತಯಾರಿ ನಡೆಯುತ್ತಿದೆ.

ತೆಲುಗಿನಲ್ಲಿ ಭೈರತಿ ರಣಗಲ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

 

ಆದರೆ ತೆಲುಗಿನಲ್ಲಿ ಯಾರು ಶಿವಣ್ಣನ ಪಾತ್ರ ಯಾರು ಮಾಡ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ತೆಲುಗಿನಲ್ಲಿ ಬಾಲಯ್ಯ, ಮಫ್ತಿಯ ರಣಗಲ್ ಪಾತ್ರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ‘ಮಫ್ತಿ’ ಚಿತ್ರದ ವಿಶೇಷ ಪ್ರದರ್ಶನವನ್ನ ಬಾಲಯ್ಯ ಅವರಿಗಾಗಿ ಆಯೋಜನೆ ಮಾಡಲಾಗುತ್ತಿದ್ದು, ಅದನ್ನು ನೋಡಿದ ಮೇಲೆ ರಿಮೇಕ್‍ನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಅಧಿಕೃತವಾಗಿ ಪ್ರಕಟಿಸುವ ಮಾಡುವ ಸಾಧ್ಯತೆ ಇದೆ.ಇನ್ನೂ, ಶ್ರೀ ಮುರಳಿಯ ಪಾತ್ರ ಯಾರು ಮಾಡಬಹುದು ಇನ್ನೂ ತಿಳಿದಿಲ್ಲ.

 

ಕನ್ನಡದ ‘ಮಫ್ತಿ’ ಸಿನಿಮಾವನ್ನು ನರ್ತನ್ ನಿರ್ದೇಶಿಸಿದ್ದು, ಮುರುಳಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ತೆರೆ ಹಂಚಿಕೊಂಡಿದ್ದಾರೆ. ವಸಿಷ್ಟ ಸಿಂಹ ತೆರೆಮೇಲೆ ಖಡಕ್ ವಿಲನ್ ಆಗಿ ಮಿಂಚಿದ್ದಾರೆ. ಇನ್ನೂ ಉಳಿದಂತೆ ದೇವರಾಜ್, ಛಾಯಾಸಿಂಗ್, ಚಿಕ್ಕಣ್ಣ ಮತ್ತಿತರರು ನಟಿಸಿದ್ದಾರೆ. ಈ ಸಿನಿಮಾಕ್ಕೆ ಜಯಣ್ಣ ಹಾಗೂ ಭೋಗೇಂದ್ರ ಅವರು ಹಣ ಹೂಡಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here