ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಎನಿಸಿದ್ದರೂ ಇದರ ನಡುವೆಯೇ ಶಾಲಾ ಕಾಲೇಜು, ಸಿನಿಮಾ, ಮಾಲ್ ಗಳಂತಹವು ಬಿಟ್ಟು ಎಲ್ಲಾ ರೀತಿಯ ಚಟುವಟಿಕೆಗಳು ಆರಂಭವಾಗಿದೆ. ಲಾಕ್ ಡೌನ್ ನಿರ್ಬಂಧಗಳು ಕೂಡಾ ಸಡಿಲವಾಗಿ ಸಾಕಷ್ಟು ದಿನಗಳೇ ಕಳೆದಿವೆ‌. ಮಹಾರಾಷ್ಟ್ರದಲ್ಲಿ ಕೂಡಾ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿ ಕೂಡಾ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಲು, ಕ್ವಾರಂಟೈನ್ ಮಾಡಲು ಕೂಡಾ ಸ್ಥಳಾವಕಾಶದ ಸಮಸ್ಯೆ ಕೂಡಾ ಉಂಟಾಗಿದ್ದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮುಂಬೈನಲ್ಲಿನ ಕೆಲವರು ಉದಾರತೆಯನ್ನು ತೋರುವ ಮೂಲಕ ಜನರ ನೆರವಿಗೆ ಮುಂದೆ ಬಂದಿದ್ದಾರೆ. ಮುಂಬೈನಲ್ಲಿ ಬಿಲ್ಡರ್ ಒಬ್ಬರು ಹೊಸದಾಗಿ ಕಟ್ಟಲಾದ 19 ಅಂತಸ್ತಿನ ಕಟ್ಟಡವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲು ಬಿಟ್ಟುಕೊಟ್ಟಿದ್ದಾರೆ. ಗ್ರೇಟರ್ ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್‌ಗೆ 19 ಅಂತಸ್ತಿನ ಹೊಸದಾಗಿ ನಿರ್ಮಿಸಲಾದ, ಜನ ವಸತಿಗೆ ಸಿದ್ಧವಾದ ಕಟ್ಟಡವನ್ನು ಪ್ರೈವೇಟ್ ಬಿಲ್ಡರ್ ಅವರು ಕ್ವಾರಂಟೈನ್ ಗಾಗಿ ಹಸ್ತಾಂತರಿಸಿದ್ದಾರೆ. ಇಂತಹ ಒಂದು ಉದಾರತೆ ಮೆರೆದ ಬಿಲ್ಡರ್ ಹೆಸರು ಮೆಹುಲ್ ಸಂಘ್ವಿ.

ಮೆಹುಲ್ ಸಂಘ್ವಿ ಅವರು “ಬಾಡಿಗೆದಾರರೊಂದಿಗೆ ಚರ್ಚಿಸಿದ ನಂತರ ನಾವು ಸ್ವಇಚ್ಛೆಯಿಂದ ಕಟ್ಟಡವನ್ನು ಕ್ವಾರಂಟೈನ್ ಗೆ ನೀಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ. ಪ್ರಸ್ತುತ ಈ ಕಟ್ಟಡದಲ್ಲಿ ಸುಮಾರು 300 ಜನ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪ್ರತಿ ಫ್ಲಾಟ್ ನಲ್ಲಿ ನಾಲ್ಕು ಜನರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎನ್ನಲಾಗಿದೆ. ಕೊರೊನಾ ಅಬ್ಬರ ನೋಡಿದರೆ ಆದಷ್ಟು ಬೇಗ ಇದರ ಮೇಲೆ ನಿಯಂತ್ರಣ ಸಾಧಿಸದಿದ್ದರೆ ಮುಂದಿನ ದಿನಗಳಲ್ಲಿ ಪರಸ್ಥಿತಿ ಇನ್ನಷ್ಟು ಕಠಿಣವಾಗಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here