ಮುಂಬೈನ ಪ್ರಮುಖ ಖಾಸಗಿ ಆಸ್ಪತ್ರೆಯೊಂದನ್ನು ಹೊಸ ರೋಗಿಗಳಿಗೆ ಮುಚ್ಚಲಾಗಿದೆ. ಏಕೆಂದರೆ ಇಲ್ಲಿನ 26 ಮಂದಿ ನರ್ಸ್ ಗಳು ಹಾಗೂ ಮೂವರು ವೈದ್ಯರಲ್ಲಿ ಕೊರೊನಾ ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ವೊಕ್ಹಾರ್ಡ್ ಆಸ್ಪತ್ರೆಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಅಭೂತಪೂರ್ವ ಏರಿಕೆ ಮತ್ತು ಕೋವಿಡ್ -19 ಅಲ್ಲಿ ಶೀಘ್ರವಾಗಿ ಹರಡಿರುವ ಬಗ್ಗೆ ತನಿಖೆಯನ್ನುವ ನಡೆಸಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಲ್ಲಿ ಕೂಡಾ ಎರಡು ಬಾರಿ ಸೋಂಕಿನ ನೆಗೆಟಿವ್ ರಿಪೋರ್ಟ್‌ ಬರುವವರೆಗೆ ಯಾರೂ ಕೂಡಾ ಆಸ್ಪತ್ರೆಯ ಕಟ್ಟಡವನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಅನುಮತಿಸುವುದಿಲ್ಲ ಎಂದು ಕಟ್ಟು ನಿಟ್ಟಾದ ಸೂಚನೆ ನೀಡಲಾಗಿದೆ. 270 ಕ್ಕೂ ಹೆಚ್ಚು ರೋಗಿಗಳು ಮತ್ತು ನರ್ಸ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೊರರೋಗಿ ವಿಭಾಗ ಮತ್ತು ತುರ್ತು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆ ಕ್ಯಾಂಟೀನ್ ರೋಗಿಗಳು ಮತ್ತು ದಾದಿಯರಿಗೆ ಆಹಾರವನ್ನು ಒದಗಿಸುತ್ತದೆ ಎನ್ನಲಾಗಿದೆ.

ವೊಕ್ಹಾರ್ಡ್ ಆಸ್ಪತ್ರೆಯ ಅಧಿಕಾರಿ ವರ್ಗ “ಆಸ್ಪತ್ರೆಯು ಸೋಂಕು ತಡೆಯುವ ಮತ್ತು ಗುಣಮಟ್ಟದ ನಿಯಂತ್ರಣದ ಅತ್ಯುನ್ನತ ಜಾಗತಿಕ ಮಾನದಂಡಗಳಿಗೆ ಬದ್ಧವಾಗಿದೆ ಎಂದಿದ್ದು, ಸೋಂಕಿನ ಮೂಲ 70 ವರ್ಷದ ರೋಗಿಯೆಂದು ಗುರುತಿಸಲಾಗಿದ್ದು, ಅವರನ್ನು ಮಾರ್ಚ್ 17 ರಂದು ಹೃದಯಕ್ಕೆ ಸಂಬಂಧಿಸಿದ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಮಾರ್ಚ್ 26 ರಂದು, ರೋಗಿಯು ಕೆಮ್ಮು ಕಾಣಿಸಿಕೊಂಡು, COVID-19 ಪರೀಕ್ಷಗೆ ಒಳಪಡಿಸಿದಾಗ ಅದು ಪಾಸಿಟಿವ್ ಆಗಿತ್ತು. ಅವರಿಂದ ಆಸ್ಪತ್ರೆಯ ಸಿಬ್ಬಂದಿ ತಿಳಿಯದೆ ಆ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here