ನೀವು ಈ ವೀಡಿಯೋ ನೋಡಿದರೆ ಒಂದು ಕ್ಷಣ ಆತಂಕದ ಸುಳಿಗೆ ಸಿಲುಕಿ ಬಿಡುತ್ತೀರಿ.ಸಾಮಾನ್ಯಾವಾಗಿ ರೈಲುಗಳಲ್ಲಿ ಚಲಿಸುವವರು ಈ ವೀಡಿಯೋ ನೋಡಿದಾಗ ಖಂಡಿತವಾಗಿ ಎಚ್ಚರವಾಗಿ ಪ್ರಯಾಣ ಮಾಡೇ ಮಾಡುತ್ತೀರಿ.ಕ್ಷಣಾರ್ಧದಲ್ಲಿ ಏನೆಲ್ಲಾ ನಡೆದುಹೋಗುತ್ತದೆ ಎಂದರೆ ಈಗ ಇರುವ ಪ್ರಾಣವೇ ನಮ್ಮಿಂದ ದೂರಾಗಿಬಿಡಬಹುದು.ಹೌದು ಇಲ್ಲೊಬ್ಬ ಹುಡುಗಿಗೆ ಹೋದ ಜೀವ ವಾಪಾಸ್ ಬಂದರೆ ಹೇಗಿರುತ್ತದೆ ಎನ್ನುವ ಅನುಭವ ಆಗಿದೆ.ಈ ಘಟನೆ ನೋಡಿದ ಪ್ರತಿಯೊಬ್ಬರೂ ಅಬ್ಬಬ್ಬಾ ಇದೆಂತಹ ಪವಾಡ ಎನ್ನುತ್ತಾರೆ. ಆದರೆ ಇದು ಪವಾಡ ಅಲ್ಲ ಬದಲಿಗೆ ಯುವಕನೋರ್ವನ ದುಸ್ಸಾಹಸದ ಫಲ.ಜೀವ ಕಳೆದುಕೊಳ್ಳಬೇಕಿದ್ದ ಹುಡುಗಿ ಬದುಕಿ ಉಳಿದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋವೊಂದರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದರು ಕೂಡ ಸಾವಿನ ಅಪಾಯದಿಂದ ಪಾರಾಗಿರಿರುವ ಘಟನೆ ನಡೆದಿದೆ. ಆದರೆ ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದುಬಂದಿಲ್ಲ.ಈಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋವೊಂದರಲ್ಲಿ ಆ ಹುಡುಗಿ ಹೇಗೆ ಚಲಿಸುತ್ತಿದ್ದ ರೈಲಿನಿಂದ ಬಿದ್ದರು ಕೂಡ ಸಾವಿನ ಅಪಾಯದಿಂದ  ಪಾರಾಗಿ ಬದುಕಿದ್ದಾಳೆ.  ಆದರೆ ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದುಬಂದಿಲ್ಲ.

ಆದರೆ ಇದು ಟ್ರ್ಯಾಕ್ ಮೇಲೆ ಬರೆದಿರುವ ಮಾಹಿತಿಯಿಂದ ಇದು ಮುಂಬೈ ಲೋಕಲ್ ರೈಲು ಎಂದು ತಿಳಿದುಬಂದಿದೆ. ಟ್ರೈನ್ ಬಾಗಿಲ ಬಳಿ ಏರ್ ಫೋನ್ ಕಿವಿಗೆ ಹಾಕಿಕೊಂಡಿದ್ದ ಮಹಿಳೆ ತನ್ನ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಟ್ರ್ಯಾಕ್ ನಲ್ಲಿ ಬಂದ ರೈಲಿನ ರಬಸಕ್ಕೆ ಕುಸಿದು ಬಿದ್ದಿದ್ದಾಳೆ.ಆದರೆ ಸಹಯಾತ್ರಿ ಅವಳನ್ನು ಕೆಳಕ್ಕೆ ಬಿಳದಂತೆ ರಕ್ಷಿಸಿದ್ದಾನೆ.ಈಗ ಸಾಮಾಜಿಕ ಜಾಲತಾಣದಲ್ಲಿ ಸಹಪ್ರಯಾಣಿಕನ ಸಮಯ ಪ್ರಜ್ಞೆಗೆ ಮೆಚ್ಚುಗೆಯ ಸುರಿಮಳೆಗೈಯ್ಯಲಾಗಿದೆ.ಈ ವೀಡಿಯೋ ನೋಡಿ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here