ಬಿಗ್ ಬಾಸ್ ಮುಗಿದ ನಂತರ ಹುಟ್ಟಿಕೊಂಡ ಹೊಸ ವಿವಾದ ಅದರ ಸ್ಪರ್ಧಿಯಾಗಿದ್ದ , ಫೈನಲ್ ವರೆಗೆ ಬಂದಿದ್ದ ಕವಿತಾ ಗೌಡ ಅವರು ಆಂಡ್ರಿವ್ ಮೇಲೆ ಮಾಡಿದ್ದ ದೂರು. ಮಾದ್ಯಮಗಳಲ್ಲಿ ಇದೊಂದು ದೊಡ್ಡ ಸುದ್ದಿಯಾಗಿದ್ದು ಕೂಡಾ ಹೌದು. ಕವಿತಾ ಅವರು ಆಂಡಿ ಯಿಂದ ತಮಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ಆಗಿದೆಯೆಂದು ಸುದ್ದಿ ಗೋಷ್ಠಿ ಕರೆದು, ಮಾತನಾಡಿ ಮಹಿಳಾ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದಾರೆ‌. ಅವರು ಆಂಡ್ರೀವ್ ಶೋ ಯಿಂದ ಹೊರಗೆ ಬಂದ ಮೇಲೂ ಕೂಡಾ ಕೆಟ್ಟದಾಗಿ ಮಾತಾಡಿದ್ದಾರೆ ಎಂದು ದೂರಿದ್ದರು. ವಿಷಯ ಹೀಗಿರಬೇಕಾದರೆ ಬಿಗ್ ಬಾಸ್ ನ ಮತ್ತೋರ್ವ ಕಂಟೆಸ್ಟಂಟ್ ಈಗ ಆಂಡ್ರಿವ್ ಪರವಾಗಿ ಮಾತನಾಡಿದ್ದಾರೆ.


ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿಯವರು ಆ್ಯಂಡಿಯ ಪರವಾಗಿ ಮಾತನಾಡಿದ್ದಾರೆ. ಅವರ ಮಾತಿನಲ್ಲೂ ಕೂಡಾ ತಿರುಳಿದೆ ಎನ್ನುವಂತೆ ಬಹಳ ಚೆನ್ನಾಗಿ ಅವರು ಮಾತನಾಡಿ ವಿಷಯವು ದೂರು ನೀಡುವಷ್ಟು ಗಂಭಿರವಲ್ಲ ಎನ್ನುವುದನ್ನು ಹೇಳಿದ್ದಾರೆ. ಕವಿತಾ ಅವರ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು ಮಾದ್ಯಮಗಳ ಸಮ್ಮುಖದಲ್ಲಿಯೇ ಆ್ಯಂಡಿಗೆ ಫೋನ್ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಅದಾದ ನಂತರ ಅವರು ಆ್ಯಂಡಿ ಪರವಾಗಿ ತಮ್ಮ ಹೇಳಿಕೆಗಳನ್ನು ಮಾದ್ಯಮದವರಿಗೆ ನೀಡಿದ್ದಾರೆ.

ಆ್ಯಂಡಿ ಗೆಲ್ಲಬೇಕೆಂಬ ಆಕಾಂಕ್ಷೆಯಿಂದ ಆಟವಾಡಿದ್ದಾರೆ. ಆತ ಬುದ್ಧಿವಂತ, ಓದಿಕೊಂಡಿರುವ ಹುಡುಗ. ಅಲ್ಲದೆ ಜೀವನದಲ್ಲಿ ಸೋಲುಗಳನ್ನು ಕಂಡಿರುವ ವ್ಯಕ್ತಿ‌. ಆದ್ದರಿಂದಲೇ ಗೆಲ್ಲುವ ಹಠದೊಂದಿಗೆ ಆಟವಾಡಿರುವುದು. ಅವನಿಗೆ ಯಾರನ್ನೂ ಪರ್ಸನಲ್ ಆಗಿ ಅಟ್ಯಾಕ್ ಮಾಡಬೇಕೆಂಬ ಉದ್ದೇಶವಿರಲಿಲ್ಲ. ಬಿಗ್ ಬಾಸ್ ಶೋ ಈಗಾಗಲೇ ಮುಗಿದಿದೆ ಎನ್ನುವ ಮೂಲಕ ಅವರು ವಿಷಯಕ್ಕೆ ತೆರೆ ಎಳೆದಿದ್ದಾರೆ. ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಅವರು ಆ್ಯಂಡಿ ಪರವಾಗಿದ್ದಾರೆ ಎಂಬುದು ತಿಳಿಯುತ್ತದೆ. ಕವಿತ ಈ ವಿಷಯಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುವರು ಎಂಬುದು ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here