ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ಹಿನ್ನೆಲೆ ಅವರ ಮನೆ ಮುಂದೆ ಚಾಪೆಯೊಂದರ ಮೇಲೆ 4 ರಿವಾಲ್ವರ್, 3 ಗನ್, 1 ಡ್ರ್ಯಾಗರ್ ಇಟ್ಟು ಪೂಜೆ ಮಾಡ್ತಿರೋ ಫೋಟೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಯುಧಪೂಜೆಯ ಫೋಟೋಗಳು ಈಗ ಮುತ್ತಪ್ಪ ರೈ ಅವರು ಸಿಸಿಬಿ ಪೋಲೀಸ್ ಮುಂದೆ ನಿಲ್ಲುವಂತೆ ಮಾಡಿದೆ‌.ಹೌದು ಮೊನ್ನೆಯ ಫೋಟೋಸ್ ಗಮನಿಸಿರುವ ಸಿಸಿಬಿ‌, ಮಾಜಿ ಭೂಗತ ದೊರೆ ಹಾಗೂ ಹಾಲಿ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಯುಧ ಪೂಜೆಯ ಫೋಟೋಗಳನ್ನ ರೈ ಅಪ್ಲೋಡ್ ಮಾಡಿದ್ದರು. ರಿವಾಲ್ವಾರ್, ಪಿಸ್ತೂಲು, ಬಂದೂಕು ಸೇರಿದಂತೆ ಕೆಲವು ಆಯುಧಗಳನ್ನ ಆಯುಧ ಪೂಜೆಯ ವೇಳೆ ಇಡಲಾಗಿತ್ತು.ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಈ ಆಯುಧಗಳ ಫೋಟೋ ವೈರಲ್ಲಾಯ್ತೋ ಆಗ್ಲೇ ಸಿಸಿಬಿ ಪೊಲೀಸರು ಆ ಫೋಟೋ ಮೇಲೆ ಕಣ್ಣಿಟ್ಟಿದ್ದರು. ಇದೀಗ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಮುತ್ತಪ್ಪ ರೈಗೆ ನೋಟಿಸ್ ನೀಡಿದೆ.

 

ಇಂದು ನೋಟಿಸ್ ನೀಡಿರೋ ಸಿಸಿಬಿ ಓಸಿಡಬ್ಲು ವಿಂಗ್‌ನ ಎಸಿಪಿ ಮರಿಯಪ್ಪ ಖುದ್ದಾಗಿ ಮುತ್ತಪ್ಪ ರೈಗೆ ನೋಟಿಸ್ ನೀಡಿದ್ದಾರೆ.ಈ ನೋಟಿಸ್ ನಲ್ಲಿ ರಿವಾಲ್ವಾರ್, ಪಿಸ್ತೂಲ್‌ನಂತಹ ಮಾರಕ ಆಯುಧಗಳನ್ನ ಪ್ರದರ್ಶಿಸಿರೋದ್ರಿಂದ ಅದು ಸಮಾಜದ ಜನರನ್ನ ಭಯದ ವಾತಾವರಣ ಹುಟ್ಟಿಸಿದೆ.ಇದರಿಂದಾಗಿ ಖುದ್ದಾಗಿ ನೋಟಿಸ್ ನೀಡಿದ ೨೪ ಗಂಟೆಯೊಳಗೆ ಸಿಸಿಬಿ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿದೆ‌. ಇದು ಮುತ್ತಪ್ಪ ರೈ ಗೆ ಆಯುಧಪೂಜೆಯಿಂದಲೇ ತೊಂದರೆ ಎದುರಿಸುವಂತಾಗಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here