ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮದುವೆ ವಿಷಯ ಎಲ್ಲರಿಗೂ ತಿಳಿದೇ ಇದೆ. ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದವು. ಅಲ್ಲದೆ ಈ ಜೋಡಿ ತಾವು ಹನಿಮೂನ್ ಗಾಗಿ ವಿದೇಶಕ್ಕೆ ಹೋಗಿರುವ ಅಲ್ಲಿ ತೆಗಿಸಿಕೊಂಡ ಫೋಟೋಗಳನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೆಲ್ಲಾ ಮುಗಿದ ಮೇಲೆ ಈಗ ಮತ್ತೊಂದು ಆಸಕ್ತಿಕರ ಬೆಳವಣಿಗೆ ಕಂಡು ಬಂದಿದೆ. ಅದೇನೆಂದರೆ ಇಟಲಿ ಪ್ರವಾಸ‌ ಮುಗಿಸಿ ಬರುತ್ತಿರುವ ಇವರ ವಿಷಯವಾಗಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ, ಮೈಸೂರು ಇವರು ಮೈಸೂರು ಜಿಲ್ಲಾಧಿಕಾರಿ ಅವರಿಗೊಂದು ಮನವಿ ಮಾಡಿದ್ದಾರೆ.

ವಿಶ್ವದ ಎಲ್ಲೆಡೆ ಈಗಾಗಲೇ ಕೊರೊನಾ ವೈರಸ್ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ, ವಿದೇಶಗಳಿಂದ ಬರುವ ಎಲ್ಲರನ್ನು ಕೂಡಾ ತಪಾಸಣೆ ಮಾಡಲಾಗುತ್ತಿದ್ದು, ಅವರಲ್ಲಿ ಕೊರೊನಾ ವೈರಸ್ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿದೇಶ ಪ್ರವಾಸ ಮುಗಿಸಿ ಬರುತ್ತಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೂ ಕೂಡಾ ಆರೋಗ್ಯ ತಪಾಸಣೆ ಮಾಡಿಸಿ ಅನಂತರ ಮೈಸೂರಿಗೆ ಪ್ರವೇಶ ನೀಡಬೇಕೆಂಬ ಮನವಿಯನ್ನು ವಿದ್ಯಾರ್ಥಿ ಯೂನಿಯನ್ ಅವರು ಜಿಲ್ಲಾಧಿಕಾರಿ ಗಳ ಮುಂದೆ ಇಟ್ಟಿದ್ದಾರೆ.

ಅವರು ನೀಡಿರುವ ಮನವಿ ಪತ್ರದಲ್ಲಿ ಮೈಸೂರು ಒಂದು ಸಾಂಸ್ಕೃತಿಕ ನಗರವಾಗಿದ್ದು, ಸುಂದರವಾದ ಈ ನಗರದಲ್ಲಿ ಈ ವರೆಗೂ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಯಾರೂ ತುತ್ತಾಗಿರುವುದಿಲ್ಲ ಮತ್ತು ನಗರದಲ್ಲಿ ಈ ರೋಗ ಕಂಡು ಬಂದಿರುವುದಿಲ್ಲ. ಮಾದ್ಯಮಗಳ ಮೂಲಕ ನಮಗೆ ತಿಳಿದು ಬಂದಿರುವ ವಿಷಯ ಏನೆಂದರೆ ಚಂನದ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಇಟಲಿ ಪ್ರವಾಸ ಮುಗಿಸಿ ಮೈಸೂರಿಗೆ ಆಗಮಿಸುತ್ತಿದ್ದು, ನಮ್ಮ ವಿನಂತಿ ಏನೆಂದರೆ ಅವರಿಗೆ covid-19 ತಪಾಸಣೆ ಮಾಡಬೇಕು. ಸೆಲೆಬ್ರಿಟಿ ಆದ ಕಾರಣಕ್ಕೆ ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದಂತೆ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here