ಯಾವ ಮಾಧ್ಯಮದವರು ಯಾವುದೇ ಲೆಕ್ಕಾಚಾರ ತೋರಿಸಲಿ , ಯಾರು ಏನೇ ಹೇಳಿದರೂ ಇಂದು ನಡೆಯುವ ಬಹುಮತ ಸಾಬೀತುಪಡಿಸುವ ಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ.ಆಗ ಕೆಲವರ ನಿರೀಕ್ಷೆ ತಲೆಕೆಳಗಾಗಲಿದೆ ಎಂದು ಮೈಸೂರು ಮತ್ತು ಕೊಡಗು ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಏನಾಗಲಿದೆ ಎಂಬುದರ ಬಗ್ಗೆ ಕೇವಲ ರಾಜ್ಯವಲ್ಲದೇ ದೇಶದೆಲ್ಲೆಡೆ ಕುತೂಹಲ ಮನೆಮಾಡಿದ್ದು ನಾಳೆ ಎಲ್ಲರ ಕಣ್ಣು ವಿಧಾನಸೌಧದ ಕಡೆ ಇರಲಿದೆ. ಫಲಿತಾಂಶ ಪ್ರಕಟವಾದ ದಿನದಿಂದ ಬಿಜೆಪಿ ಸರಕಾರ ರಚಿಸುವುದರ ಬಗ್ಗೆ, ಬಿ.ಎಸ್. ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದರ ಬಗ್ಗೆ ಟ್ವೀಟ್ ಮಾಡಿ ಕಾರ್ಯಕರ್ತರಲ್ಲಿ ಭರವಸೆ

ಮೂಡಿಸುತ್ತಿದ್ದ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಅವರು ನಾಳೆಯ ವಿಶ್ವಾಸಮತ ಸಾಬೀತಿನ ಕುರಿತು ಟ್ವೀಟ್ ಮಾಡಿದ್ದು ಅದು ಎಲ್ಲೆಡೆ ವೈರಲ್ ಆಗಿದೆ.ಬಿಜೆಪಿ ಮಾತ್ರ ಮುಂದೆ ಏನಾಗಲಿದೆ ಎನ್ನುವ ಕುರಿತು ಎಳ್ಳಷ್ಟು ಗುಟ್ಟನ್ನು ಸಹ ಮಾಧ್ಯಮದ ಮುಂದೆ ಬಿಚ್ಚಿಟ್ಟಿಲ್ಲ. ನಾಳೆ ನಡೆಯಲಿರುವ ಘಟನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ”

ಮಾಧ್ಯಮಗಳೇ, ನಾಳೆಯಿಂದ ಯಾರು ಮುಖ್ಯಮಂತ್ರಿ ಅಂತ ನೀವು ಎಷ್ಟು ಸಾರಿ ಕೇಳಿದರೂ, ಕಪ್ಪೂ ನಮ್ದೇ, ಸರ್ಕಾರವೂ ನಮ್ದೇ, ಮುಖ್ಯಮಂತ್ರಿಯೂ ನಮ್ ಯಡಿಯೂರಪ್ಪನವರೇ! ” ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ರಾಜಕಾರಣದ ಚದುರಂಗದಾಟದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here