ಬಿಜೆಪಿಯ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 5 ರಂದು ದೀಪ ಹಚ್ಚುವ ಬಗ್ಗೆ ನೀಡಿದ ಸಂದೇಶದ ಕುರಿತಾಗಿ ಮಾತನಾಡುತ್ತಾ ದೀಪಗಳನ್ನು ಹಚ್ಚಿದರೆ ವೈರಸ್ ದೀಪದ ಬಳಿ ಬರುತ್ತದೆ. ದೀಪದ ಶಾಖಕ್ಕೆ ವೈರಸ್ ಸಾಯುತ್ತದೆ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯನ್ನು ನೀಡಿದವರು ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್ ಅವರು. ಇವರು ಮೈಸೂರಿನಲ್ಲಿ ದೀಪದ ಬಗ್ಗೆ ಹೀಗೆ ತಮ್ಮದೇ ಆದಂತಹ ವಿವರಣೆಯನ್ನು ನೀಡುವ ಮೂಲಕ ಗಮನವನ್ನು ಸೆಳೆದಿದ್ದಾರೆ. ಇದನ್ನು ವೈಜ್ಞಾನಿಕ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ‌.

ಅವರು ತಮ್ಮ ವ್ಯಾಖ್ಯಾನದಲ್ಲಿ ದೀಪವನ್ನು ಹಚ್ಚಿದರೆ ವೈರಸ್ ಎಲ್ಲೇ ಇದ್ದರೂ ದೀಪದ ಬಳಿಗೆ ಬರುತ್ತದೆ. ಆಗ ಅದು ದೀಪದ ಶಾಖಕ್ಕೆ ಸಾಯುತ್ತದೆ. ಅದಕ್ಕೆ ನಮ್ಮ ಮನೆಯ ಒಳಗೆ ವೈರಸ್ ಇರಬಾರದೆಂದು ಇಂತಹುದೊಂದು ಚಿಂತನೆಯನ್ನು ಮಾಡಿದ್ದಾರೆ. ಹಾಗಾಗಿ ನಾಳೆ ರಾತ್ರಿ ನಾವೆಲ್ಲರೂ ಕೂಡಾ ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸೋಣ ಎಂದು ಹೇಳಿದ್ದಾರೆ. ಶಾಸಕರು ಮೈಸೂರಿನ ಎಂಜಿ ಮಾರುಕಟ್ಟೆಯಲ್ಲಿ ಕ್ಯಾಂಡಲ್,ಮಾಸ್ಕ್ ಹಾಗೂ ದೀಪ ವಿತರಣೆಯನ್ನು ಕೂಡಾ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅವುಗಳನ್ನು ಪಡೆಯಲು ಜನರು ಮುಗಿ ಬಿದ್ದಿದ್ದಾರೆ. ಆ ಕೂಡಲೇ ಪೋಲಿಸರು ಜನರನ್ನು ಚದುರಿಸಿರುವ ಘಟನೆ ನಡೆದಿದೆ. ಮೋದಿಯವರು ಶುಕ್ರವಾರ ಬೆಳಿಗ್ಗೆ ಲೈವ್ ವಿಡಿಯೋ ಒಂದರಲ್ಲಿ ಜನರ ಎದುರು ಬಂದು, ರಾಷ್ಟ್ರದ ಜನತೆಗೆ ಏಪ್ರಿಲ್ 5 ರ ರಾತ್ರಿ ತಮ್ಮ ಮನೆಗಳಲ್ಲಿ ವಿದ್ಯುತ್ ದೀಪ ಆರಿಸಿ ಹಣತೆಯನ್ನು ಹಚ್ಚಲು, ಕ್ಯಾಂಡಲ್ ಬೆಳಗಿಸಲು ಅಥವಾ ಮೊಬೈಲ್ ಟಾರ್ಚ್ ಗಳನ್ನು ಆನ್ ಮಾಡಿ ಒಂಬತ್ತು ನಿಮಿಷ ಬೆಳಗುವಂತೆ ಸಂದೇಶ ನೀಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here