ರಾಜ ಮಾತೆ ಪ್ರಮೋದಾ ದೇವಿಯವರು ಇಂದು ಜಯ ಚಾಮರಾಜೇಂದ್ರ ಒಡೆಯರ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡುವ ಸಲುವಾಗಿ ಸುದ್ದಿ ಗೋಷ್ಠಿಯನ್ನು ಕರೆದ ಸಂದರ್ಭದಲ್ಲಿ ಅವರು ಸರಕಾರದಿಂದ ತಮಗೆ ದೊರಕದಿರುವ ಸಹಕಾರದ ಬಗ್ಗೆ ಮಾತನಾಡಿ , ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅವರು ಮಾತನಾಡುತ್ತಾ ಮೈಸೂರು ಅರಸರ ಅರಮನೆ ಆಸ್ತಿಯ ಮೇಲೆ ಕೆಲವರು ತಮ್ಮ ಕಣ್ಣು ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ನ್ಯಾಯಲಯದಿಂದ ತೀರ್ಮಾನ ಬಂದಿದೆಯಾದರೂ ಸರ್ಕಾರ ಮಾತ್ರ ಅರಮನೆಗೆ ಸೇರಿದ ಜಾಗಕ್ಕೆ ಖಾತೆ ಮಾಡಿಕೊಡುತ್ತಿಲ್ಲ ಎಂದು ಹೇಳಿದ್ದಾರೆ.

ಹಿಂದಿನ ರಾಜಕಾರಣಿಯ ದ್ವೇಷಕ್ಕೆ ಅರಮನೆ ಆಸ್ತಿ ಗುರಿಯಾಗಿದೆ ಎಂದ ಅವರು ಹಿಂದೆ ಹಳಬರು ಒಂದು ರೀತಿಯ ತೊಂದರೆಯನ್ನು ನೀಡಿದರೆ, ಈಗ ಹೊಸಬರು ಇನ್ನೊಂದು ರೀತಿಯಲ್ಲಿ ತೊಂದರೆಯನ್ನು ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ರಾಜ ವಂಶಸ್ಥರ ಆಸ್ತಿ ಯಾರಿಗೆ ಸೇರಬೇಕೆಂದು ಕೇಂದ್ರ ಸರ್ಕಾರ ಈ ಹಿಂದೆಯೇ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರ ಸೂಚಿಸಿರುವ ಪ್ರಕಾರ ಆ ಆಸ್ತಿಯೆಲ್ಲಾ ಅರಮನೆಗೆ ಸೇರಬೇಕಾಗಿದೆ. ಅದನ್ನು ಮನ್ನಿಸಿ ಅಧಿಕಾರಿಗಳು ಕೂಡ ಸಹಿ ಮಾಡಿದ್ದರೂ, ಕೆಲವರು ಅದು ಸರ್ಕಾರದ ಆಸ್ತಿ ಎನ್ನುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜಕೀಯ ಪ್ರವೇಶ ಮಾಡುವ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ನನಗೂ ಗೊತ್ತಿದೆ ಆದರೆ ರಾಜಕಾರಣ ಮಾಡುವುದು ತಿಳಿದಿಲ್ಲ ಎಂದಿದ್ದಾರೆ. ಆದ್ದರಿಂದಲೇ ನಾನು ರಾಜಕೀಯಕ್ಕೆ ಬರುವ ಆಸಕ್ತಿ ಹೊಂದಿಲ್ಲ ಎಂದಿದ್ದಾರೆ. ದೊಡ್ಡ ಕೆರೆ ಪಕ್ಕದ ಜಾಗಕ್ಕೆ ಖಾತೆ ಮಾಡಿಕೊಡಲು ಸರ್ಕಾರ ತಮಗೆ ಸಹಕಾರ ನೀಡುತ್ತಿಲ್ಲ ಎನ್ನುವ ಮೂಲಕ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುತ್ತಾ, ಕೋರ್ಟ್ ನಿಂದ ನಮ್ಮ ಪರವಾಗಿ ಆದೇಶ ಬಂದರೂ ಅದಕ್ಕೆ ಸ್ಪಂದಿಸದೆ, ಸರ್ಕಾರ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿದೆ ಎಂದವರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here