ಮಂಗಳಮುಖಿಯರು ಎಂದರೆ ಸಮಾಜದಲ್ಲಿ ಒಂದು ರೀತಿಯ ಕೀಳಿರಿಮೆ ಸದಾ ಇದ್ದೇ ಇದೆ. ಅವರನ್ನು ನೋಡಿದರೆ ಬೇಸರ ಮಾಡಿಕೊಂಡು ದೂರ ಹೋಗಲು ಬಯಸುತ್ತಾರೆ ಜನ. ಕೆಲವೊಮ್ಮೆ ಅವರ ವರ್ತನೆ ಕೂಡಾ ಸಾಮಾನ್ಯ ಜನರು ಅವರ ಬಗ್ಗೆ ಬೇಸರ ಮಾಡಿಕೊಳ್ಳಲು ಕಾರಣವೂ ಹೌದು‌. ಆದರೆ ಇಂತಹವರ ಮಧ್ಯೆ ಕೆಲವು ಮಂಗಳ ಮುಖಿಯರು ತಾವು ಮಾಡುವ ಉತ್ತಮ ಕಾರ್ಯದಿಂದಲೇ ಹೆಸರಾಗುವರು. ಅಂತಹವರಲ್ಲಿ ಒಬ್ಬರು ಕೀಳಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಮಂಗಳಮುಖಿ ಎಂ‌‌‌.ಡಿ.ಅಕ್ರಂ. ಭಿಕ್ಷೆ ಬೇಡಿ ಬಂದ ಹಣದಿಂದ ಇಬ್ಬರು ಬಾಲಕಿಯರನ್ನು ಸಾಕುತ್ತಿರುವ ಅಕ್ರಂ ಆ ಬಾಲಕಿಯರಿಗೆ ಅಕ್ಷರಶಃ ಮಾತೃ ಸ್ವರೂಪಿ ಆಗಿದ್ದಾರೆ.

ಅಕ್ರಂ ಸಾಕುತ್ತಿರುವ ಈ ಇಬ್ಬರೂ ಬಾಲಕಿಯರು ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವ ಹಂತಕ್ಕೆ ಬಂದಿದ್ದಾರೆ. ಮೈಸೂರಿನ ರಾಜೀವ ನಗರ ನಿವಾಸಿಯಾಗಿರುವ ಈ ಮಂಗಳಮುಖಿ ಎಂ. ಡಿ. ಅಕ್ರಂ ಅವರಿಗೆ ತಮ್ಮ ಜೀವನ ನಡೆಸುವುದು ಕಷ್ಟ, ಆದರೆ ಸಹೋದರನ ಮಗಳು ಪತಿಯಿಂದ ದೂರಾದ ಮೇಲೆ, ಆಕೆಯ ನೆರವಿಗೆ ನಿಂತು ಆಕೆಯ ನಾಲ್ಕು ಮಕ್ಕಳನ್ನು ತಾನೇ ಪೋಷಣೆ ಮಾಡುವ ಹೊಣೆ ಹೊತ್ತಿದ್ದಾರೆ. ಸಹೋದರನ ಮಗಳು ಅಸ್ತಾ ಬಾನು ಕುಟುಂಬಕ್ಕೆ ಮೈಸೂರಿನ ಗಾಯತ್ರಿಪುರಂನಲ್ಲಿ ಬಾಡಿಗೆ ಮನೆ ಮಾಡಿ ಇಟ್ಟು, ಮಕ್ಕಳ ಶಾಲಾ ಶುಲ್ಕ ಇತರೆ ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ.

ಆಸ್ತಾ ಬಾನುವಿನ ಇಬ್ಬರು ಹೆಣ್ಣು ಮಕ್ಕಳು ಓದಿ ವಿದ್ಯಾವಂತರಾಗಬೇಕೆಂದು ಫಾತಿಮ ಹಾಗೂ ಹಾಜಿರಾರನ್ನು ಶಾಲೆಗೆ ಸೇರಿಸಿ, ಭಿಕ್ಷೆ ಬೇಡಿ ಬಂದ ಹಣದಲ್ಲೇ ಈ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ.
ಅದು ಮಾತ್ರವಲ್ಲದೇ ಅವರಿಗೆ ಕರಾಟೆ ಶಿಕ್ಷಣ ಕೊಡಿಸುತ್ತಿದ್ದು, ಕರಾಟೆ ಕ್ಲಾಸಿನ ತರಬೇತು ನೀಡುವ ತರಬೇತುದಾರ ಇವರ ಪರಿಸ್ಥಿತಿ ನೋಡಿ ಆ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಇನ್ನು ಇಬ್ಬರೂ ಬಾಲಕಿಯರೂ ಕೂಡಾ ಬಾಕ್ಸಿಂಗ್ ಪಟುಗಳಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದು, ನವದೆಹಲಿಯಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫಾತೀಮಾ ಚಿನ್ನದ ಪದಕ ಗಳಿಸಿದರೆ, ಹಾಜಿರಾ ಬೆಳ್ಳಿ ಪದಕ ಗಳಿಸಿ ಅಕ್ರಂ ಅವರಿಗೆ ಸಂತಸ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here