ಮೈಸೂರು ರಸ್ತೆಯ ರಾಮನಗರ ಜಿಲ್ಲೆಯ ಒಡೆಯರಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಇಂದು ಬೆಳಿಗ್ಗೆ ಶ್ರೀರಂಗ ಖಾಸಗಿ ಬಸ್ ಮತ್ತು ಟೆಂಪೋ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂರು ಜನರು ಮೃತಪಟ್ಟಿದ್ದು ಒಂಭತ್ತು ಜನರಿಗೆ ಗಾಯಗಳಾಗಿವೆ. ಸರ್ಕಲ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಜನಗಳ ಮೇಲೆ ಬಸ್ ಹರಿದಿದೆ ಎಂದು ತಿಳಿದು ಬಂದಿದೆ.ಟೆಂಪೋ ಗೆ ಡಿಕ್ಕಿ ಒಡೆದ ಬಸ್ ಹತೋಟಿ ತಪ್ಪಿ ಬಸ್ ಗಾಗಿ ಕಾಯುತ್ತಿದ್ದ ಜನರ ಮೇಲೆ ಹರಿದಿದೆ

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಪಘಾತ ನಡೆದ ಸ್ಥಳದಲ್ಲಿ ಮೃತ ಸಂಬದಿಕರು ಪ್ರತಿಭಟನೆ ಮಾಡುತ್ತಿದ್ದಾರೆ.ಮೈಸೂರು ರಸ್ತೆ ಸುಮಾರು ಮೂರು ನಾಲ್ಕು ಕಿಮೀ ತನಕ ಜಾಮ್ ಆಗಿದೆ.ಸ್ಥಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.ವೀಡಿಯೋ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here