ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನ ಪಡೆಯಲು ಲಕ್ಷೋಪ ಹಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ‌. ನೆನ್ನೆಯಿಂದ ಸಿದ್ದಗಂಗಾ ಮಠಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ನಡೆದಾಡುವ ದೇವರ ಭಕ್ತರು ಆಗಮಿಸುತ್ತಿದ್ದು ನೆನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೆ ಸರಿಸುಮಾರು ಏಳು‌ ಲಕ್ಷಕ್ಕೂ ಅಧಿಕ ಭಕ್ತರು ನಡೆದಾಡುವ ದೇವರ ದರ್ಶನ ಪಡೆದಿದ್ದಾರೆ. ಇಂದು ಬೆಳಿಗ್ಗೆಯಿಂದ ಬರುತ್ತಿರುವ ಭಕ್ತರ ಸಂಖ್ಯೆ ದುಪ್ಪಟ್ಟಾಗಿದ್ದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಹನ್ನೆರಡು ಲಕ್ಷಕ್ಕೂ ಅಧಿಕ ಭಕ್ತರು ಶ್ರೀಗಳ ದರ್ಶನ ಪಡೆಯಲಿದ್ದಾರೆ. ಬರುವ ಪ್ರತಿಯೊಬ್ಬ ಭಕ್ತರಿಗೆ ಸಹ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ‌.ಸಿದ್ಧಗಂಗಾ ಮಠಕ್ಕೆ ಆಗಮಿಸುವ ಭಕ್ತರಿಗೆ ಶ್ರೀಮಠ ಪಕ್ಕದ ರಾಗಿ ಹೊಲದಲ್ಲಿ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. 40 ಎಕರೆಯಲ್ಲಿ ಊಟದ ಕೌಂಟರ್ ಇರಲಿದೆ.

ತುಮಕೂರಿನ ಬಸವೇಶ್ವರ ಶಾಲೆ ಮೈದಾನದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ 400 ಅಡುಗೆ ಭಟ್ಟರು, 3,000 ಸ್ವಯಂಸೇವಕರು ಪ್ರಸಾದ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪೊಲೀಸರು, ಸ್ವಯಂ ಸೇವಕರು, ಮಾಧ್ಯಮದವರ ಜತೆಗೆ ನಗರದ ವಿವಿಧೆಡೆಯ 35 ಕೌಂಟರ್​ನಲ್ಲಿ ಪ್ರಸಾದ ಹಾಗೂ ಕುಡಿಯುವ ನೀರು ವಿನಿಯೋಗವಾಗಲಿದೆ. ಸಿದ್ಧಗಂಗಾ ಮಠಕ್ಕೆ ತೆರಳುವ ಮಾರ್ಗಮಧ್ಯ ಪ್ರಸಾದ ಸಿಗುವ ವ್ಯವಸ್ಥೆ ಮಾಡಲಾಗಿದೆ.ಇಂದು ಇನ್ನುನೂ 5 ಲಕ್ಷ ಜನರು ಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದ್ದು, ಅಡಕೆ ಹಾಗೂ ಬಾಳೆ ಎಲೆಯ ಪಿಂಡಿಗಳನ್ನು ವಿವಿಧೆಡೆಗಳಿಂದ ಭಕ್ತರು ತಂದು ಹಾಕುತ್ತಿದ್ದಾರೆ.

ಹಳ್ಳಿ ಹಳ್ಳಿಗಳಿಂದ ತರಕಾರಿ, ಅಕ್ಕಿ, ಬೇಳೆ ಸೇರಿ ಅಡುಗೆ ಪದಾರ್ಥ ತಂದು ಸುರಿಯಲಾಗುತ್ತಿದೆ. ಎಷ್ಟು ಲಕ್ಷ ಜನರು ಬಂದರೂ ಯಾರಿಗೂ ತೊಂದರೆಯಾಗದಂತೆ ದಾಸೋಹ ನಡೆಸುವ ಶ್ರೀಮಠದ ಪರಂಪರೆ ಈ ಜನಸಾಗರದಲ್ಲಿಯೂ ಮುಂದುವರಿಯಲಿದೆ. ಮಠದ ಜತೆ ಜಿಲ್ಲಾಡಳಿತವೂ ನೆರವು ನೀಡಿದೆ. ಸಾವಿರಾರು ಸಂಖ್ಯೆಯ ಸ್ವಯಂಸೇವಕರು ಪ್ರಸಾದ ಹಾಗೂ ಕುಡಿಯುವ ನೀರು ಪೂರೈಸಲು ಸನ್ನದ್ಧರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here