ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕಾಗಿ ಅನೇಕ ಗಣ್ಯರು ಎಲ್ಲೆಡೆಯಿಂದಲೂ ಅವರ ಅಂತಿಮ ದರ್ಶನವನ್ನು ಪಡೆಯಲು ಬರುತ್ತಿದ್ದಾರೆ. ಹಾಗೆ ಬಂದ ಸಂದರ್ಭದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯೋಗ ಗುರು ಬಾಬಾ ರಾಮ್ ದೇವ್ ಅವರು ತಮ್ಮ ಮನಸ್ಸಿನ ಮಾತುಗಳನ್ನು ಮಾದ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಲಕ್ಷಾಂತರ ಜನರ ಆಶಯವಾದ ಶ್ರೀಗಳಿಗೆ ಭಾರತ ರತ್ನ ಏಕೆ ನೀಡಲಿಲ್ಲ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದ್ದಾರೆ. ಬಾಬಾ ರಾಮ್ ದೇವ್ ಅವರು ಮಾದ್ಯಮಗಳ ಎದುರಿನಲ್ಲಿ ಶ್ರೀಗಳಿಗೆ ಭಾರತ ರತ್ನ ಕೊಟ್ಟರೆ ಆ ಪುರಸ್ಕಾರಕ್ಕೆ ಗೌರವ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಗುರು ಪರಂಪರೆಗೆ ಭವ್ಯ ಇತಿಹಾಸವಿದೆ. ಗುರು ಪರಂಪರೆ, ಯೋಗ, ದಾಸೋಹ ಪದ್ಧತಿಗಳೆಲ್ಲವೂ ಭಾರತದಿಂದ ಬಂದತಹುವುಗಳೇ ಆಗಿವೆ. ಇಂದು ಜಗತ್ತಿನೆಲ್ಲೆಡೆ ಇದು ಆಚರಣೆಯಲ್ಲಿದೆ. ಬಸವಣ್ಣನವರು ನೀಡಿದ್ದು ಕಾಯಕವೇ ಕೈಲಾಸ ಎಂಬ ತತ್ವವನ್ನು. ಇಂದು ನಡೆದಾಡುವ ದೇವರು, ನವಯುಗದ ಬಸವಣ್ಣನವರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಲಿಂಗೈಕ್ಯರಾಗಿದ್ದು ನಾಡಿಗಲ್ಲ , ಇಡೀ ದೇಶಕ್ಕೆ ಆಗಿರುವ ದೊಡ್ಡ ನಷ್ಟ ಎಂದು ಅವರು ನುಡಿದರು. ಹೀಗೆ ಹೇಳುತ್ತಾ ಅವರು ಭಾವುಕರಾದರು.

111 ವರ್ಷಗಳ ಅವರ ಸುದೀರ್ಘ ಜೀವನ, ಚಿಂತನೆ, ಸಾಮಾಜಿಕ ಕಳಕಳಿ ಇವೆಲ್ಲವೂ ಆಧ್ಯಾತ್ಮ ಜ್ಞಾನದ ಕೈಗನ್ನಡಿಗಳಿದ್ದಂತೆ. ಅವರ ಜೀವನ ಮುಂದಿನ ಪೀಳಿಗೆಗೆ ಆದರ್ಶ ಪ್ರಾಯ ಎಂದು ಅವರು ಹೇಳಿದರು.‌ ಅವರ ಮಾತು ಅಕ್ಷರಶಃ ಸತ್ಯ. ಭಾರತ ರತ್ನ ಶ್ರೀ ಗಳಿಗೆ ದೊರೆತಿದ್ದರೆ ಅದು ಆ ಪುರಸ್ಕಾರಕ್ಕೆ ಸಂದ ಗೌರವವಾಗುತ್ತಿತ್ತು‌. ಬಾರದಿದ್ದರೂ ನಷ್ಟವಿಲ್ಲ‌ ಏಕೆಂದರೆ ಶ್ರೀಗಳು ಪುರಸ್ಕಾರ ಗಳನ್ನು ಮೀರಿದ ದಿವ್ಯ ರತ್ನ ಹಾಗೂ ಭೂಮಿಗೆ ಬೆಳಕು ನೀಡಲು ಬಂದ ದಿವ್ಯ ಚೇತನ. ಅವರ ಸ್ಥಾನ ಎಂದೆಂದಿಗೂ ಎಲ್ಲಾ ಪ್ರಶಸ್ತಿಗಳಿಗಿಂತ ಮೀರಿದ್ದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here