ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಈಗಲೂ ನಮ್ಮ ನಡುವೆ ಇದ್ದಾರೆ. ನಡೆದಾಡುವ ದೇವರು ಕಲಿಸಿರುವ ಅನೇಕ ಉತ್ತಮ ವಿಷಯಗಳು ಮನುಕುಲಕ್ಕೆ ಎಂದೆಂದಿಗೂ ಅಧ್ಯಾಯಗಳಾಗಿ ಉಳಿಯುತ್ತವೆ. ನೂರ ಹನ್ನೊಂದು ವರ್ಷಗಳ ಕಾಲ ದೈಹಿಕವಾಗಿ ನಮ್ಮ ಜೊತೆ ಇದ್ದ ನಡೆದಾಡುವ ದೇವರು ಇನ್ನು ಮುಂದೆ ಮೇಲಿನಿಂದಲೇ ನಮ್ಮೆಲ್ಲರ ಕಾಯಕವನ್ನು ಗಮನಿಸುತ್ತಿರುತ್ತಾರೆ. ನಡೆದಾಡುವ ದೇವರ ಬಳಿ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೂ ಅತ್ಯುತ್ತಮ ಬುದ್ದಿ ಕಲಿತವರೇ ಆಗಿದ್ದಾರೆ. ಸಿದ್ದಗಂಗಾ ಮಠ ಇದುವರೆಗೂ ಸರಿಸುಮಾರು ನಲವತ್ತು ಲಕ್ಷಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಜಗತ್ತಿನ ಏಕೈಕ ಶಿಕ್ಷಣ ಕಾಶಿ ಆಗಿದೆ. ಅಂತಹ ಪುಣ್ಯಕ್ಷೇತ್ರ ಸಿದ್ದಗಂಗಾ ಮಠ.

ಕೊನೆಯ ದಿನ ನಡೆದಾಡುವ ದೇವರು ನಡೆಸಿದ್ದರು ಮಹಾಪವಾಡ.ಬೆಳಿಗ್ಗೆ 3-30 ಕ್ಕೆ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ಏರುಪೇರು ,ರಕ್ತದೊತ್ತಡ, ಕಿಡ್ನಿ ಹಾಗೂ ಹೃದಯದ ಬಡಿತ ಬಿಪಿ ಎಲ್ಲವೂ ಏರಿಳಿತ ಆರಂಭವಾಗಿತ್ತು.ಆಗ ಡಾ.ಪರಮೇಶ್ ಅವರು ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಹೇಳಿದಾಗ ಕಿರಿಯ ಶ್ರೀಗಳಿಗೆ ಆತಂಕವಾಗಿತ್ತು. ಆಗ ಶ್ರೀಗಳ ಇಷ್ಟಲಿಂಗ ಪೂಜೆಗೆ ಕಿರಿಯ ಶ್ರೀಗಳು ಸಿದ್ಧಪಡಿಸಿಕೊಂಡರು. ಬೆಳಿಗ್ಗೆ 5 ಗಂಟೆಗೆ ನಡೆದಾಡುವ ದೇವರ ಕೋಣೆಗೆ ಆಗಮಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಶ್ರೀ ಶಿವಕುಮಾರ ಸ್ವಾಮಿಗಳ ಕೈಯಲ್ಲಿ ಇಷ್ಟಲಿಂಗ ಇಟ್ಟು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ಆರಂಭಿಸಿದರು.

ಆಗ ಪೂಜೆ ಮುಗುದ ನಂತರ ಶ್ರೀ ಶಿವಕುಮಾರ ಸ್ವಾಮಿಗಳು ನಿಧಾನವಾಗಿ ಸುಮಾರು ಮೂವತ್ತು ನಲವತ್ತು ಸೆಕೆಂಡುಗಳ ಕಾಲ ಕಣ್ಣು ಬಿಟ್ಟು ಶ್ರೀ ಸಿದ್ದಲಿಂಗ ಸ್ವಾಮಿಗಳನ್ನು ನೋಡಿದರು.ಆ ಕಣ್ಣಿನ ನೋಟದಲ್ಲಿ ನಡೆದಾಡುವ ದೇವರು ತಮ್ಮ ತಪಸ್ಸನ್ನು ಶ್ರೀ ಸಿದ್ಧಲಿಂಗ ಸ್ವಾಮಿಗಳಿಗೆ ದಿವ್ಯ ದೃಷ್ಟಿ ಮೂಲಕ ಧಾರೆ ಎರೆದಿದ್ದರು. ನಂತರ ಮತ್ತೆ ಶ್ರೀ ಶಿವಕುಮಾರ ಸ್ವಾಮಿಗಳು ಕಣ್ಣು ಮುಚ್ಚಿಕೊಂಡರು‌. ಅದಾದ ನಂತರ ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯಕ್ಕೆ ಮಠದಲ್ಲಿ ಪೂಜೆ ಆರಂಭವಾದವು. ಮತ್ತೆ ಬೆಳಿಗ್ಗೆ ನಡೆದಾಡುವ ದೇವರ ಆರೋಗ್ಯ ತಪಾಸಣೆಯನ್ನು ಡಾ.ಪರಮೇಶ್ ಅವರು ನೋಡಿದಾಗ ಶ್ರೀಗಳ ಆರೋಗ್ಯ ಮತ್ತೆ ತುಂಬಾ ಗಂಭೀರವಾಗಿತ್ತು.

ಮಠದಲ್ಲಿ ಪಂಚಾಕ್ಷರ ಮಂತ್ರ ಶಿವ ಸ್ಮರಣೆ ಆರಂಭವಾಗಿತ್ತು.ಇದಾದ ನಂತರ ಮಠದ ಮಕ್ಕಳು ನಡೆದಾಡುವ ದೇವರ ಆರೋಗ್ಯಕ್ಕಾಗಿ ಪ್ರಾರ್ಥನೆ ಆರಂಭವಾಗಿತ್ತು. ವೈದ್ಯರು ಏನೇ ಪ್ರಯತ್ನ ಪಟ್ಟರೂ ನಡೆದಾಡುವ ದೇವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಗೆ ಬರಲೇ ಇಲ್ಲ. ಬೆಳಿಗ್ಗೆ ಹತ್ತಕ್ಕೆ ಬಿಪಿ ಇಳಿಯಲು ಆರಂಭವಾಯಿತು ಆದರೆ ಮತ್ತೆ ಬಿಪಿ ಏರಿಕೆ ಆಗಲೇ ಇಲ್ಲ ಬೆಳಿಗ್ಗೆ 11-44 ಕ್ಕೆ ನಡೆದಾಡುವ ದೇವರ ಬಿಪಿ ಮತ್ತು ಹೃದಯ ಬಡಿತ ಸಂಪೂರ್ಣ ಸ್ಥಬ್ಧವಾಗಿತ್ತು‌. ಬೆಳಿಗ್ಗೆ 11- 44 ಕ್ಕೆ ನಡೆದಾಡುವ ದೇವರು ಶಿವೈಕ್ಯರಾದರು‌. ಆದರೆ ಕಳೆದ ನಾಲ್ಕು ದಿನಗಳಿಂದ ಕಣ್ಣನ್ನೇ ತೆರೆಯದಿದ್ದ ನಡೆದಾಡುವ ದೇವರು ಕೊನೆಯ ದಿನ ಮಾತ್ರ ಬೆಳಿಗ್ಗೆ 5-25 ಕ್ಕೆ ಕಣ್ಣು ಬಿಟ್ಟು ತಮ್ಮ ದಿವ್ಯ ದೃಷ್ಟಿಯಿಂದ ಶ್ರೀ ಸಿದ್ಧಲಿಂಗ ಸ್ವಾಮಿಗಳಿಗೆ ಆಶೀರ್ವಾದ ನೀಡಿ ಶಕ್ತಿ ತುಂಬಿದ್ದರು. ಆ ನಲವತ್ತು ಸೆಕೆಂಡುಗಳು ನಡೆದಾಡುವ ದೇವರು ಶ್ರೀ ಸಿದ್ದಲಿಂಗ ಸ್ವಾಮಿಗಳ ಕಣ್ಣಲ್ಲಿ ಕಣ್ಣಿಟ್ಟಿದ್ದ ಬಗ್ಗೆ ಸ್ವತಃ ವೈದ್ಯರಾದ ಡಾ.ಪರಮೇಶ್ ಅವರು ಸಹ ಆಶ್ಚರ್ಯ ಕ್ಕೆ ಒಳಗಾಗಿದ್ದರು.

Photo credit tv ೯

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here