ಕೊನೆಗೂ ದುನಿಯಾ ವಿಜಯ್ ಅವರು ಧೃಡವಾದ ನಿರ್ಧಾರ ಕೈಗೊಂಡಿದ್ದಾರೆ‌. ದುನಿಯಾ ವಿಜಿ ಪತ್ನಿ ನಾಗರತ್ನ ಅವರಿಂದ ವಿಚ್ಚೇದನ ಪಡೆಯಲು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಇಂದು ಮಧ್ಯಾಹ್ನ ಅರ್ಜಿ ಸಲ್ಲಿಸಿರುವ ದುನಿಯಾ ವಿಜಿ, ತಮ್ಮ ವಕೀಲರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಕ್ರೌರ್ಯದ ಕಾರಣವೊಡ್ಡಿ ವಿಚ್ಚೇದನ ಕೋರಿಕೆ ಮಾಡಲಾಗಿದೆ. ಎರಡು ವರ್ಷದಿಂದ ನಾವು ಸಂಸಾರವನ್ನೇ ಮಾಡಿಲ್ಲ.ನಾಗರತ್ನ ನನ್ನ ಹೆತ್ತವರನ್ನು ಕಡೆಗಣಿಸುತ್ತಿದ್ದಳು ಎಂದು ದುನಿಯಾ ವಿಜಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ದುನಿಯಾ ವಿಜಿ ಮತ್ತು ನಾಗರತ್ನ ಪರಸ್ಪರ ಒಪ್ಪಿಗೆ ಇಲ್ಲದೆ ಅರ್ಜಿ ಸಲ್ಲಿಸಿರುವ ಕಾರಣ ನಾಗರತ್ನ ಕೂಡ ವಿಚ್ಛೇದನಕ್ಕೆ ಆಕ್ಷೇಪಣೆ ಸಲ್ಲಿಸಬಹುದು ಎನ್ನಲಾಗಿದೆ. ಮೀಡಿಯೇಷನ್ ದಂಪತಿಯನ್ನು ಕರೆದು ಕೌನ್ಸಿಲಿಂಗ್ ನಡೆಸಬಹುದು. ಕೌನ್ಸಿಲಿಂಗ್ ನಲ್ಲಿ ಫೇಲ್ ಆದರೆ ಮಾತ್ರ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ದುನಿಯಾ ವಿಜಿ ವರ್ಷಗಳ ಹಿಂದೆ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ರಾಜಿ ಸಂಧಾನದ ಮೂಲಕ ಅರ್ಜಿ ವಾಪಸ್ ಪಡೆದಿದ್ದರು. ಈಗ ಮತ್ತೆ ಕೋರ್ಟ್ ಮೆಟ್ಟಿಲೇರಿರುವ ದುನಿಯಾ ವಿಜಯ್​, ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಾಗರತ್ನ ಅವರಿಂದ ವಿಚ್ಚೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಿಜಿ ಪರ ವಕೀಲೆ ರಾಜರಾಜೇಶ್ವರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.ಮೊನ್ನೆಯಿಂದ ದುನಿಯಾ ವಿಜಿ ಕುಟುಂಬದಲ್ಲಿ ಹೈಡ್ರಾಮಾ ನಡೆದಿತ್ತು.ಮಗಳು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ದೂರು ದಾಖಲಾಗಿ ನಿನ್ನೆ ಪೊಲೀಸರು ದುನಿಯಾ ವಿಜಿ ಮಕ್ಕಳನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದರು.

ನಾಗರತ್ನ ತಲೆ ಮರೆಸಿಕೊಂಡಿದ್ದರು. ಮಗಳು ಮೋನಿಕಾ ಸುಳ್ಳು ಆರೋಪ ಮಾಡಿದ್ದಾಳೆಂದು ಸಾಬೀತಾಗಿತ್ತು. ನಾಗರತ್ನ ಕೀರ್ತಿಗೌಡಗೆ ಚಪ್ಪಲಿಯಿಂದ ಹೊಡೆದ ಸಿಸಿಟಿವಿ ದೃಶ್ಯಾವಳಿಯೂ ಸಹ ಲಭ್ಯವಾಗಿತ್ತು. ಹೀಗೆ ನಡೆದ ಹೈಡ್ರಾಮದಿಂದ ಬೇಸತ್ತ ದುನಿಯಾ ವಿಜಿ ಪತ್ನಿ ನಾಗರತ್ನ ಅವರಿಂದ ವಿಚ್ಚೇದನ ಪಡೆಯಲು ಇಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೊದಲು ಸಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಸಹ ಇದಕ್ಕೆ ನಾಗರತ್ನ ಒಪ್ಪಿರಲಿಲ್ಲ. ಹೀಗಾಗಿ ದುನಿಯಾ ವಿಜಿ ಸುಮ್ಮನಾಗಿದ್ದರು. ಇದೀಗ ಬೀದಿ ರಂಪಾಟವಾದ ನಂತರ ದುನಿಯಾ ವಿಜಿ ಪತ್ನಿ ನಾಗರತ್ನಳಿಂದ ವಿಚ್ಚೇದನ ಪಡೆಯಲೇಬೇಕೆಂಬ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here