ಅಬಕಾರಿ ಸಚಿವ ನಾಗೇಶ್ ಅವರು ನೀಡಿರುವ ಹೇಳಿಕೆಯೊಂದು ಈಗ ಸುದ್ದಿಯಾಗಿದೆ. ಅವರು ಹೇಳಿಕೆ ನೀಡಿರುವುದು ನಿಜಕ್ಕೂ ಒಂದು ಸಂಚಲನವನ್ನು ಉಂಟು ಮಾಡುವ ಹಾಗೆ ಇದೆ. ಮಾನ್ಯ ಅಬಕಾರಿ ಸಚಿವರು ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ ಮಾಡಲಾಗಿದೆ. ಕೆಲವು ಕಡೆ ಮದ್ಯದ ಅಂಗಡಿ ದೂರ ಇರುತ್ತದೆ, ಮತ್ತೆ ಕೆಲವು ಕಡೆಗಳಲ್ಲಿ ಮದ್ಯದ ಅಂಗಡಿಗಳೇ ಇರಲ್ಲ ಆದ್ದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರವೊಂದನ್ನು ಕಂಡುಕೊಳ್ಳುವ ಚಿಂತನೆ ನಡೆಸಿದ್ದು, ಮನೆ ಬಾಗಿಲಿಗೆ ಮದ್ಯ ಪೂರೈಸುವ ಆಲೋಚನೆ ಇಲಾಖೆಯ ಮುಂದಿದೆ ಎಂದಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊಬೈಲ್ ವೈನ್ ಶಾಪ್‍ಗಳ ಬಗ್ಗೆ ಚಿಂತನೆ ನಡೆಸಲಾಗಿದೆಯೆಂದೂ, ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದು, ಇದರಿಂದ ಆದಾಯ ಬರುತ್ತದೆ ಎಂದು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್ ಗಳಿಗೆ ಚಾಲನೆ ನೀಡುವ ಬಗ್ಗೆ ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ. ಇದರ ಮುಖ್ಯ ಉದ್ದೇಶವು ಗುಣಮಟ್ಟದ ಮದ್ಯ ಪೂರೈಕೆ ಮಾಡುವುದು ಎಂದು ಮಾನ್ಯ ಸಚಿವರು ಹೇಳಿದ್ದಾರೆ.

ಬೇರೆ ಕಡೆಗಳಿಂದ ಮದ್ಯವನ್ನು ತರಿಸಿ ಪಾರ್ಟಿಗಳಲ್ಲಿ ಬಳಸುವುದರಿಂದ ನಮ್ಮ ಅಧಿಕಾರಿಗಳು ಅಂತಹ ಪಾರ್ಟಿಗಳ ಮೇಲೆ ಧಾಳಿ ನಡೆಸುತ್ತಾರೆ ಎಂದು ಹೇಳಿದ ಅವರು, ಮಾದಕ ವಸ್ತುಗಳ ಬಳಕೆಯನ್ನು ನಿಯಂತ್ರಿಸಿ ಅದಕ್ಕೆ ಕಡಿವಾಣ ಹಾಕುವುದಾಗಿಯೂ ಹೇಳಿದ್ದಾರೆ. ಪ್ರಸ್ತುತ ಮದ್ಯಪಾನ ನಿಷೇಧದ ವಿಚಾರವಾಗಿ ಸರ್ಕಾರ ಚಿಂತನೆಯನ್ನು ನಡೆಸಿಲ್ಲ ಎಂದವರು ಮಾಹಿತಿ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here