ಧಾರಾವಾಹಿಗಳು ಜನ ಜೀವನದ ಒಂದು ಭಾಗವಾಗಿಯೇ ಹೋಗಿದೆ ಅನ್ನುವ ಮಟ್ಟಕ್ಕೆ ತಮ್ಮ ಪ್ರಭಾವವನ್ನು ಹೊಂದಿದೆ. ಒಂದು ನಿರ್ದಿಷ್ಟ ವರ್ಗದ ಜನರಿಗೆ ಧಾರಾವಾಹಿಗಳೇ ಜೀವಾಳ. ಅವರ ದಿನ ಧಾರಾವಾಹಿಗಳು ಇಲ್ಲದೇ ಮುಗಿಯುವುದಿಲ್ಲ ಎಂದು ಕೂಡಾ ಹೇಳಬಹುದು. ಅದರಲ್ಲೂ ಕೆಲವು ಧಾರಾವಾಹಿಗಳು ವೀಕ್ಷಕರನ್ನು ಯಾವ ಮಟ್ಟಕ್ಕೆ ಸೆಳೆಯುತ್ತವೆ ಎಂದರೆ , ಅದನ್ನು ನೋಡದೆ ಹೋದರೆ ನಿದ್ದೆ ಬರುವುದಿಲ್ಲ ಎನ್ನುವಂತೆ ಇದೆ. ಅಂತಹ ಧಾರಾವಾಹಿಗಳಲ್ಲಿ ಒಂದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ.

ಈ ಧಾರಾವಾಹಿಯ ಅಮೃತ ಪಾತ್ರಧಾರಿ ದೀಪಿಕಾ ದಾಸ್ ಅವರು ನಾಗಿಣಿ ಪಾತ್ರಧಾರಿಯಾಗಿ ಜನಪ್ರಿಯರಾಗಿದ್ದು ಮಾತ್ರವೇ ಅಲ್ಲದೇ ಆ ಪಾತ್ರಕ್ಕಾಗಿ ಪ್ರಶಸ್ತಿಗಳನ್ನು ಕೂಡಾ ಗೆದ್ದಿದ್ದರು. ಆದರೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಸೀಸನ್ 7 ಕ್ಕೆ ಸ್ಪರ್ಧಿಯಾದ ಹಿನ್ನೆಲೆಯಲ್ಲಿ ನಾಗಿಣಿ ಧಾರಾವಾಹಿಯ ಅಂತಿಮ ಅಧ್ಯಾಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ನಾಗಿಣಿ ಮುಗಿಯುತ್ತಿದೆ ಎಂದು ಅದರ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಮೊದಲೇ ಝೀ ಕನ್ನಡ ನಾಗಿಣಿ ಸೀಸನ್ ಎರಡರ ಪ್ರೋಮೋ‌ ಬಿಡುಗಡೆ ಮಾಡಿದೆ.

ನಾಗಿಣಿ 2 ರಲ್ಲಿ ಈ ಬಾರಿ ನಾಗಿಣಿ ಯಾರಾಗಲಿದ್ದಾರೆ ಎಂಬುದು ಎಲ್ಲರ ಕುತೂಹಲವನ್ನು ಕೆರಳಿಸಿದೆ. ಈ ಬಾರಿ ನಾಗಿಣಿಯಾಗಿ ಜನರ ಮುಂದೆ ಬರುತ್ತಿರುವುದು ಪುಟ್ಟ ಗೌರಿ ಖ್ಯಾತಿಯ ಸುಪ್ರಸಿದ್ಧ ನಟಿ ಹಿಮಾ ಅಲಿಯಾಸ್ ನಮ್ರತಾ ಗೌಡ. ನಾಗಿಣಿ 1 ನೇ ಸೀಸನ್ ಅನ್ನು ಹಯವದನ ಅವರು ನಿರ್ದೇಶನ ಮಾಡಿದ್ದರು. ಇನ್ನು ಈ ಬಾರಿ ನಾಗಿಣಿ 2 ನೇ ಸೀಸನ್ ನ ಪ್ರೋಮೋ ಕೂಡಾ ಸಾಕಷ್ಟು ಕುತೂಹಲವನ್ನು ಕೆರಳಿಸುವಂತೆ ಇದ್ದು, ಪುಟ್ಟ ಗೌರಿ ಧಾರಾವಾಹಿ ನಂತರ ನಮ್ರತಾ ಅವರು ನಾಗಿಣಿಯಾಗಿ ಹೇಗೆ ಜನರ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here