ಕಾಂಗ್ರೆಸ್ ಪಕ್ಷದ ಬ್ಲಾಕ್ ಮಟ್ಟದ ಕಾರ್ಯಕ್ರಮದಲ್ಲಿ ಸಚಿನ್‌ಗೌಡ ಮತ್ತು ಶಾಸಕ ಎನ್‌ಎ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಪರಸ್ಪರ ಕಿತ್ತಾಡಿಕೊಂಡು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಇಬ್ಬರೂ ದೂರು ನೀಡಿರುವ ಪ್ರಕರಣ ವರದಿಯಾಗಿದೆ.
ಭಾನುವಾರ ಯುವ ಕಾಂಗ್ರೆಸ್ ಘಟಕದ ವತಿಯಿಂದ ‘ಯಂಗ್ ಇಂಡಿಯಾ ಕಿ ಬೋಲೋ’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿನ್‌ಗೌಡ ಮತ್ತು ಯುವ ಕಾಂಗ್ರೆಸ್ ಘಟಕದ ಮುಖಂಡರಾದ ಗೌತಮ್ ಮತ್ತು ಶಿವಕುಮಾರ್ ಜೊತೆ ಗಲಾಟೆ ಮಾಡುತ್ತಿದ್ದ. ಜಗಳ ಬಿಡಿಸಲು ಹೋದಾಗ ನನ್ನ ಮೇಲೆಯೇ ಆರೋಪ ಹೊರಿಸಿ ಬೈಯ್ದಾಡಿದ ಎಂದು ಮೊಹಮ್ಮದ್ ನಲಪಾಡ್ ವೈಯಾಲಿಕಾವಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ದೂರು ನೀಡಿರುವ ಸಚಿನಗೌಡ ಮೊಹಮ್ಮದ ನಲಪಾಡ್ ನನ್ನ ಮೇಲೆ ಹಲ್ಲೆ ಮಾಡಲೆತ್ನಿಸಿದ ನನ್ನ ಬೆಂಬಲಿಗರು ನನ್ನನ್ನು ರಕ್ಷಿಸಿ ಹಲ್ಲೆಯಾಗದಂತೆ ತಡೆದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಮೊಹಮ್ಮದ್ ನಲಪಾಡ್ ಸಚಿನಗೌಡ ಉದ್ದೇಶಪೂರ್ವಕಾಗಿಯೇ ನನ್ನ ಮೇಲೆ ಜಗಳವಾಡಿದ ಜೊತೆಗೆ ನಿನ್ನ ಮಾನವನ್ನು ಮಾಧ್ಯಮಗಳ ಮೂಲಕ ಹರಾಜು ಹಾಕುತ್ತೇನೆ ಎಂದು ಕೂಗಾಡಿದ. ಹೀಗಾಗಿ ದೂರು ನೀಡಬೇಕಾಗಿ ಬಂದಿದೆ. ಈ ಸಂಗತಿಯನ್ನು ಕೆಪಿಸಿಸಿ ಮುಖಂಡ ಡಿಕೆ ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. ನಾನು ‘ಯಂಗ್ ಇಂಡಿಯಾ ಕೀ ಬೋಲೋ’ ಕಾರ್ಯಕ್ರಮದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಾರ್ಯಕ್ರಮದ ಅಂಗವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಐವರಿಗೆ ಬಹುಮಾನ ನೀಡಲಾಗಿದೆ. ಸ್ಪರ್ಧೆಯಲ್ಲಿ ನಾನು ವಿಜಯಿ ಆಗಿರಲಿಲ್ಲ. ಸಚಿನಗೌಡ ಆತನೂ ಸೋತ್ತಿದ್ದ. ಆದರೆ, ಅನಗತ್ಯವಾಗಿ ಗೌತಮ್ ಮತ್ತು ಶಿವಕುಮಾರ್ ಜೊತೆ ನನ್ನನ್ನು ಸ್ಟೇಜ್ ಮೇಲೆ ಕರೆಯಲಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಜಗಳಕ್ಕಿಳಿದ.ಈ ಸಂದರ್ಭದಲ್ಲಿ ಸಮಾಧಾನಪಡಿಸಲೆತ್ನಿಸಿದೆ. ಆಗ ನನ್ನ ವಿರುದ್ಧವೇ ತಿರುಗಿಬಿದ್ದು ನನಗೆ ಬೆದರಿಕೆಯೊಡ್ಡಿದ.

ಆಗ ತಳ್ಳಾಟ ನೂಕಾಟ ಆಯಿತು. ಕೂಡಲೇ ಸ್ಥಳದಲ್ಲಿದ್ದ ಜನರು ನನ್ನನ್ನು ಸಮಾಧಾನಪಡಿಸಿ ಹೊರಗೆ ಕರೆದುಕೊಂಡು ಬಂದರು. ಆದರೂ ಆತ ನನ್ನ ವಿರುದ್ಧ ಏರಿದ ಧ್ವನಿಯಲ್ಲಿ ಮಾತನಾಡುತ್ತಿದ್ದ. ಹೀಗಾಗಿ ಆತನ ವಿರುದ್ಧ ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದೇನೆ ಎಂದು ಹೇಳಿದರು.ಮೊಹಮ್ಮದ್ ನಲಪಾಡ್ ದೂರು ನೀಡಿದ ನಂತರ ಸಚಿನಗೌಡ ಕೂಡ ತನ್ನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿ ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲಿಸಿದ್ದಾರೆ.ಈ ಮೊದಲು ನಲಪಾಡ್ ಯುಬಿ ಸಿಟಿಯಲ್ಲಿನ ಫರ್ಜಿ ಬಾರ್‌ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲುವಾಸ ಅನುಭವಿಸಿದ್ದರು. ಈ ಪ್ರಕರಣ ಇನ್ನೂ ಇತ್ಯರ್ಥ ಆಗಿಲ್ಲ. ತದನಂತರ ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಸರಣಿ ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿದ್ದ ಸಂಗತಿಯಿಂದಾಗಿ ವಿವಾದ ಸೃಷ್ಟಿಸಿಕೊಂಡಿದ್ದರು. ಇದೀಗ ಜಗಳದ ಕಾರಣ ಮತ್ತೆ ವಿವಾದದ ಮೂಲಕ ಮುನ್ನೆಲೆಗೆ ಬಂದಂತಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here