ಮತದಾನ ಜಾಗೃತಿಯ ಬಗ್ಗೆ ಎಷ್ಟೇ ಪ್ರಯತ್ನಗಳನ್ನು ಮಾಡುತ್ತಿದ್ದರೂ ಹಲವರು ಮತಗಟ್ಟೆಗಳ‌ ಕಡೆಗೆ ಬರಲು ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಅಲ್ಲದೆ ಅವರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತುಕೊಳ್ಳುವುದಿಲ್ಲ. ಅಲ್ಲದೆ ಮತದಾನದ ಸಂದರ್ಭದಲ್ಲಿ ಮಾದ್ಯಮಗಳಲ್ಲಿ ಎಷ್ಟು ಮತದಾನ ಆಯಿತು ಎಂದು ಶೇಕಡಾವಾರು ಪ್ರಮಾಣದಲ್ಲಿ ತೋರಿಸಿದಾಗ ಅದನ್ನು ನೋಡಿ ಕಳೆದ ಬಾರಿಗಿಂತ ಕೆಲವು ಕಡೆ ಕಡಿಮೆ ಎನಿಸಿದರೆ, ಇನ್ನೂ ಕೆಲವು ಕಡೆ ತೃಪ್ತಿಕರ ಎನಿಸುತ್ತದೆಯೇ ಹೊರತು, ಅತ್ಯುತ್ತಮ ಎನಿಸುವುದಿಲ್ಲ. ಆದರೆ ಈ ಬಾರಿ ಇದಕ್ಕೆ ಅಪವಾದವಾಗಿದೆ ಒಂದು ಮತಗಟ್ಟೆ.

ಈ ಬಾರಿ ಹಳದಿ ಬಣ್ಣದ ಸೀರೆಯುಟ್ಟು ಒಬ್ಬ ಮತಗಟ್ಟೆ ಅಧಿಕಾರಿ ಎಲ್ಲರ ಗಮನವನ್ನು ಸೆಳೆದಿದ್ದರು. ಮಾದ್ಯಮಗಳಲ್ಲಿ ಆಕೆಯ ಫೋಟೋಗಳು ಬಹು ಬೇಗ ವೈರಲ್ ಆಗಿ ಸುದ್ದಿಯಾಗಿತ್ತು. ಹಲವರು ಯಾರು ಈ ಚೆಲುವೆ ಎಂದೆಲ್ಲಾ ಆಕೆಯ ಬಗ್ಗೆ ತಿಳಿಯಲು ಪ್ರಯತ್ನಗಳನ್ನು ಕೂಡಾ ಮಾಡಿದ್ದುಂಟು. ಅದಾದ ಮೇಲೆ ಆಕೆ ಯಾರು, ಎಂದು ತಿಳಿದ ಮೇಲೆ ಗೊತ್ತಾದ ವಿಷಯ ಆಕೆಯೊಬ್ಬ ಶಿಕ್ಷಕಿ. ರಾಜಸ್ಥಾನದ ನಳಿನಿ ಸಿಂಗ್ ಎಂದು ಹಾಗೂ ಆಕೆ ಜೈಪುರದ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಲು ಬಂದಿದ್ದರು.

ಈಗ ಅದಕ್ಕಿಂತ ವಿಶೇಷವಾದ ಇನ್ನೊಂದು ಮಾಹಿತಿ ಇದೆ. ಅದೇನೆಂದರೆ ಮತ ಜಾಗೃತಿಯ ನಂತರವೂ ಮತ ಹಾಕಲು ಕೆಲವರು ಹಿಂದೇಟು ಹಾಕಿದರೆ, ನಳಿನಿ ಸಿಂಗ್ ಅವರು ಕಾರ್ಯ ನಿರ್ವಹಿಸಿರುವ ಮತಗಟ್ಟೆಯಲ್ಲಿ 94% ಮತದಾನ ನಡೆದು ಎಲ್ಲರ ಹುಬ್ಬೇರಿಸಿದೆ. ಬಹುಶಃ ಭಾರತದಲ್ಲಿ ಮತಗಟ್ಟೆಗಳಲ್ಲಿ ಹೀಗೆ ಸುಂದರವಾದ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಿದರೆ ಮತದಾನ ಅಧಿಕವಾಗಬಹುದೇ? ಎಂಬ ಪ್ರಶ್ನೆ ಮೂಡಿಸಿದೆ. ಏನೇ ಆದರೂ ಜನ ಆ ಪ್ರಮಾಣದಲ್ಲಿ ಮತ ನೀಡಿರುವುದು ನಿಜಕ್ಕೂ ಹರ್ಷದಾಯಕವಾದ ವಿಚಾರವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here